Health Tips: ಸದಾ ಆರೋಗ್ಯವಾಗಿರಲು ಅಜ್ಜಿ ಹೇಳಿದ ಈ ಅದ್ಭುತ ಸಲಹೆಗಳನ್ನು ಪಾಲಿಸಿರಿ
ಹುಬ್ಬುಗಳು ಕಪ್ಪಾಗಲು ಪ್ರತಿದಿನ ಹರಳೆಣ್ಣೆಯನ್ನು ಹಚ್ಚುವುದರಿಂದ ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕೂದಲ ಆರೈಕೆಗೆ ವಾರಕ್ಕೊಮ್ಮೆ ಮೊಸರು ಮತ್ತು ಮೊಟ್ಟೆಯನ್ನು ಸೇರಿಸಿ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ. ತಿಂಗಳಿಗೊಮ್ಮೆ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು.
ಬೆಳ್ಳುಳ್ಳಿ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ. ಹೆಚ್ಚು ಹೊತ್ತು ಮಲಗುವುದರಿಂದ ದೇಹದಲ್ಲಿ ಜಡತ್ವ ಉಂಟಾಗುತ್ತದೆ. ದಾಳಿಂಬೆ ತಿನ್ನುವುದರಿಂದ ಕರುಳಿನ ರೋಗಗಳು ಬರುವುದಿಲ್ಲ.
ಪ್ರತಿದಿನ ಟೊಮೇಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಬಂಗು ಮಾಯವಾಗುತ್ತದೆ. ಕಹಿಬೇವಿನ ಎಲೆಗಳನ್ನು ಪ್ರತಿದಿನ ಜಗಿದು ಉಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗಿ ಹಲ್ಲುಗಳು ಗಟ್ಟಿಯಾಗುತ್ತವೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುಕುರುಕೊಳ್ಳುತ್ತದೆ.
ಒಂದು ಹಸಿ ಆಲೂಗಡ್ಡೆಯ ತುಂಡಿನಿಂದ ಮುಖಕ್ಕೆ ಉಜ್ಜುವುದರಿಂದ ಮುಖದಲ್ಲಿರುವಂತಹ ಕಪ್ಪು ಕಲೆಗಳು ಮಾಯವಾಗುತ್ತವೆ. ದ್ರಾಕ್ಷಿಯನ್ನು ತಿಂದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬಾರದು. ಕುಡಿದರೆ ಭೇದಿಯಾಗುವ ಸಾಧ್ಯತೆ ಇರುತ್ತದೆ. ತಣ್ಣೀರು ಕುಡಿದ ನಂತರ ಅಪ್ಪಿತಪ್ಪಿಯೂ ಚಹಾ ಕುಡಿಯಬಾರದು.
ಹೊಕ್ಕಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೂರಾರು ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉರುಗುಳು ದುರ್ಬಲವಾಗುತ್ತವೆ. ಸೌತೆಕಾಯಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.