Health Tips: ತೂಕ ಇಳಿಸಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ
ಅಂಗಡಿಯಲ್ಲಿ ಮಾರಾಟವಾಗುವ ಬಾಟಲಿಯ ಹಣ್ಣಿನ ರಸಗಳು ನಿಜವಾಗಿಯೂ ಸಂಪೂರ್ಣ ಹಣ್ಣಲ್ಲ, ಅವುಗಳು ಹೆಚ್ಚು ಸಂಸ್ಕರಿಸಿದ ಸಕ್ಕರೆಯನ್ನು ಹೊಂದಿರುತ್ತವೆ. ವಾಸ್ತವವಾಗಿ, ಅವುಗಳಲ್ಲಿ ಸೋಡಾದಂತೆಯೇ ಸಕ್ಕರೆ ಮತ್ತು ಕ್ಯಾಲೋರಿಗಳು ಅಧಿಕವಾಗಿವೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಂಸ್ಕರಿಸಿದ ಹಣ್ಣಿನ ಜ್ಯೂಸ್ ಸೇವನೆಯನ್ನು ತಪ್ಪಿಸಿ.
ನಾವು ಎಷ್ಟೇ ಕಠಿಣವಾಗಿ ಡಯಟ್ ಅನುಸರಿಸುತ್ತೇವೆ ಎಂದರೂ ಚಾಕೊಲೇಟ್ ಅಥವಾ ಕ್ಯಾಂಡಿಯನ್ನು ಕಂಡೊಡನೆ ಒಂದೇ ಒಂದು ತಿಂದರೆ ಏನೂ ಆಗುವುದಿಲ್ಲ ಎಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಮಾಡಿಕೊಂಡು ತಿಂದು ಬಿಡುತ್ತೇವೆ. ಆದರೆ ಇದರಲ್ಲಿ ಸಿಹಿ ಮತ್ತು ಕ್ಯಾಲೋರಿ ಅಧಿಕವಾಗಿರುತ್ತದೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲು (Weight Loss) ಪ್ರಯತ್ನಿಸುತ್ತಿದ್ದರೆ ಇವುಗಳಿಂದ ದೂರವಿದ್ದರೆ ಒಳಿತು.
ಇದನ್ನೂ ಓದಿ- Weight Loss With Chocolate: ಪ್ರತಿದಿನ ಈ ಸಮಯದಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಿ!
ಸಿಹಿಯಾದ ಸಕ್ಕರೆ ಪಾನೀಯಗಳು ಎಂದರೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು ಮತ್ತು ಸೋಡಾದಂತಹ ಪಾನೀಯಗಳೆಂದರೆ ಹಲವರಿಗೆ ಬಹಳ ಇಷ್ಟವಾಗುತ್ತದೆ. ಆದರೆ ಈ ಪದಾರ್ಥಗಳು ನಿಮ್ಮ ತೂಕ ಹೆಚ್ಚಳಕ್ಕೂ (Weight Gain) ಕಾರಣವಾಗುವುದು. ಮಾತ್ರವಲ್ಲ ಅವುಗಳನ್ನು ಅತಿಯಾಗಿ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದನ್ನೂ ಓದಿ- Turmeric Cleanser For Skin: ಮುಖದ ಮೇಲಿನ ಕಲೆ, ಡೆಡ್ ಸ್ಕಿನ್ ನಿವಾರಣೆಗೆ ಬಳಸಿ ಅರಿಶಿನದ ಕ್ಲೆನ್ಸರ್
ತೂಕ ಇಳಿಸುವ ಗುರಿಯನ್ನು ಸಾಧಿಸಲು ಆರೋಗ್ಯಕರ ಆಹಾರ ಸೇವನೆ ಜೊತೆಗೆ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಅತ್ಯಗತ್ಯ. ಹೊಟ್ಟೆಯ ಹಸಿವು ಆಂತರಿಕ ಕಿರಿಕಿರಿಯನ್ನು ಉಂಟುಮಾಡಬಹುದು. ಜೊತೆಗೆ ಅಸಿಡಿಟಿ ಸಮಸ್ಯೆಯನ್ನೂ ಹೆಚ್ಚಿಸುತ್ತದೆ. ಹಲವೊಮ್ಮೆ ಇದು ತೂಕ ಹೆಚ್ಚಾಗಲೂ ಕಾರಣವಾಗುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರು ಪಾನೀ-ಪೂರಿ, ಆಲೂಗಡ್ಡೆ ಚಿಪ್ಸ್ ಸೇರಿದಂತೆ ಜಂಕ್ ಫುಡ್ಸ್ ಮತ್ತು ಇತರ ಹುರಿದ ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಮೈದಾದಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಮತ್ತು ಆಲೂಗಡ್ಡೆ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.