Health Tips: ಪುರುಷರ ಆ ಶಕ್ತಿ ಹೆಚ್ಚಿಸಲು ಇವುಗಳನ್ನು ಸೇವಿಸಿರಿ

Tue, 05 Mar 2024-2:29 pm,

ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ಹೀಗಾಗಿ ಪುರುಷರು ನಿಯಮಿತವಾಗಿ ಬೀಟ್‌ರೂಟ್‌ ಸೇವಿಸುವುದು ಉತ್ತಮ. ಬೀಟ್‌ರೂಟ್‌ಗಳಲ್ಲಿ ವಿಟಮಿನ್ ʼcʼ, ನಾರಿನಂಶ ಮತ್ತು ಮ್ಯಾಂಗನೀಸ್‌ ಹೆಚ್ಚಿದೆ. 

ಲೈಂಗಿಕ ಜೀವನವನ್ನು ಉತ್ತೇಜಿಸಲು ಆಹಾರದಲ್ಲಿ  ಮಸಾಲೆಗಳ ರಾಜ ಕರಿಮೆಣಸು ಇರಲೇಬೇಕು. ನಿಯಮಿತವಾಗಿ ಮೆಣಸು ಸೇವನೆಯಿಂದ ನೀವು ಲೈಂಗಿಕ ಸಮಸ್ಯೆ ಸೇರಿದಂತೆ ಹಲವಾರು ರೋಗಗಳಿಂದ ಮುಕ್ತಿ ಹೊಂದಬಹುದು. 

ಬ್ರಕೋಲಿ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದೆ. ಬ್ರೊಕೋಲಿಯು ಪೊಟ್ಯಾಷಿಯಂನಿಂದ ಸಮೃದ್ಧವಾಗಿದ್ದು, ಇದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ. ಫೈಬರ್, ವಿಟಮಿನ್ C, K, ಕಬ್ಬಿಣ ಸೇರಿದಂತೆ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. 

ಡಾರ್ಕ್‌ ಚಾಕೊಲೇಟ್‌ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕೊಕೊ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿದೆ. ಕೊಕೊ ಉತ್ಕರ್ಷಣ ನಿರೋಧಿ ಅಂಶಗಳನ್ನೊಳಗೊಂಡಿದ್ದು, ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ. 

ಇವುಗಳಲ್ಲದೆ ಪುರುಷರು ತಮ್ಮ ಲೈಂಗಿಕ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಅಂದರೆ ಪ್ರತಿದಿನದ ತಮ್ಮ ಆಹಾರದಲ್ಲಿ ದಾಳಿಂಬೆ ಮತ್ತು ಕಲ್ಲಂಗಡಿ ಹಣ್ಣು ಸೇವಿಸಬೇಕು. ಇವೆಲ್ಲವೂ ಸಹ ಪುರುಷರ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link