Health Tips: ಪುರುಷರ ಆ ʼಶಕ್ತಿʼಗೆ ಈ ಆಹಾರಗಳನ್ನು ಸೇವಿಸಬೇಕು
ಪುರುಷರು ನಿಯಮಿತವಾಗಿ ಹಸಿರು ಸೊಪ್ಪನ್ನು ಸೇವಿಸಬೇಕು. ಹಸಿರು ಸೊಪ್ಪುಗಳ ಪೈಕಿ ಪಾಲಕ್ ಸೇವಿಸುವುದು ತುಂಬಾನೇ ಒಳ್ಳೆಯದು. ಪಾಲಕ ದೇಹದಲ್ಲಿನ ರಕ್ತದ ಹರಿವನ್ನು ಸರಿಪಡಿಸಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದನ್ನು ಸಲಾಡ್ ರೀತಿಯಲ್ಲಿ ಅಥವಾ ಪ್ರೋಟೀನ್ ಶೇಕ್ ಜೊತೆಗೆ ಸೇವಿಸಬಹುದು.
ಪುರುಷರು ಪ್ರತಿದಿನ ಬಾದಾಮಿ ಸೇವಿಸಬೇಕು. ಬಾದಾಮಿಯಲ್ಲಿ ಮೆಗ್ನೀಸಿಯಮ್ ಹೇರಳವಾಗಿ ಕಂಡುಬರುತ್ತದೆ. ಈ ಮೆಗ್ನೀಸಿಯಮ್ ಸ್ನಾಯು ಮತ್ತು ನರಗಳನ್ನು ಬಲಗೊಳಿಸುತ್ತದೆ. ಬಾದಾಮಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕವಾಗಿದೆ. ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬಾದಾಮಿ ಸೇವಿಸುವುದು ಉತ್ತಮ ಫಲಿತಾಂಶ ನೀಡುತ್ತದೆ.
ಪುರುಷರು ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸಬೇಕು. ಟೊಮೆಟೊ ಮತ್ತು ಕಲ್ಲಂಗಡಿ ಲೈಕೋಪೀನ್ ಸಮೃದ್ಧ ಆಹಾರಗಳಾಗಿವೆ. ಈ ಹಣ್ಣುಗಳು ಉತ್ಕರ್ಷಣ ನಿರೋಧಕವಾಗಿದ್ದು, ಪುರುಷರನ್ನು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ. ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆಯನ್ನೂ ಕಡಿಮೆ ಮಾಡುತ್ತದೆ. ಕಲ್ಲಂಗಡಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಇದರಲ್ಲಿರುವ ಸಿಟ್ರುಲೈನ್ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಆಲೂಗಡ್ಡೆಯಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚು ಪೊಟ್ಯಾಸಿಯಮ್ ಇರುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ʼಸಿʼ ಮತ್ತು ಫೈಬರ್ ಇದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಲೂಗಡ್ಡೆಯಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಪುರುಷರು ನಿಯಮಿತವಾಗಿ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.
ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಸರು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಅವಶ್ಯಕ. ಪುರುಷರಿಗೆ ಮಹಿಳೆಯರಂತೆ ಆಸ್ಟಿಯೊಪೊರೋಸಿಸ್ ಅಪಾಯವಿದ್ದು, ಹೀಗಾಗಿ ಪುರುಷರು ಪ್ರತಿದಿನ ಮೊಸರು ಸೇವಿಸಬೇಕು. ಮೊಸರಿಗೆ ಸಕ್ಕರೆ ಬದಲು ಹಣ್ಣುಗಳನ್ನು ಬೆರೆಸಿ ತಿನ್ನುವುದು ಉಪಯುಕ್ತವೆಂದು ಹೇಳಲಾಗಿದೆ.