Health Benefits of Eggs: ಮೊಟ್ಟೆ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Sat, 15 Jul 2023-2:32 pm,

ಮೊಟ್ಟೆಗಳು ಕೇವಲ ಬಾಯಿ ರುಚಿಗೆ ಮಾತ್ರವಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್‍ಗಳು ಮತ್ತು ಪೌಷ್ಟಿಕ ಸತ್ವಗಳ ಮೂಲಗಳಿಂದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ.

ಮೊಟ್ಟೆಗಳು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಮೊಟ್ಟೆಗಳಲ್ಲಿ ಮನುಷ್ಯನ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿರುವ ಅಪರ್ಯಾಪ್ತ ಕೊಬ್ಬಿನ ಅಂಶಗಳು ಮತ್ತು ಬಹು ಮುಖ್ಯ ಪೌಷ್ಟಿಕಾಂಶಗಳಾದ ವಿಟಮಿನ್ B6, B12 ಮತ್ತು ವಿಟಮಿನ್ ‘D’ ಅಂಶಗಳಿವೆ.  

ಮೊಟ್ಟೆಯು ರಂಜಕ, ವಿಟಮಿನ್ A, B, D, E ಮತ್ತು ಕಬ್ಬಿಣದಂತಹ ಜೀವಸತ್ವಗಳನ್ನು ಹೊಂದಿರುತ್ತವೆ. ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಮೊಟ್ಟೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.

ಮೊಟ್ಟೆಗಳನ್ನು ತಿನ್ನುವುದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿರುವ ಒಮೆಗಾ 3-ಕೊಬ್ಬಿನ ಆಮ್ಲಗಳು ಹೃದಯಕ್ಕೆ ಪ್ರಯೋಜನಕಾರಿ. ಅವು ಬೀಟೈನ್ ಮತ್ತು ಕೋಲಿನ್ ಹೊಂದಿರುತ್ತದೆ, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

ಮೊಟ್ಟೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ 'A' ಅಂಶ ಹೆಚ್ಚಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಯಥೇಚ್ಛವಾಗಿ ಕಣ್ಣಿನ ಆರೋಗ್ಯಕ್ಕೆ ಬೇಕಾಗಿರುವ ಲ್ಯೂಟೀನ್ ಮತ್ತು ಝೆಕ್ಸನ್ಥಿನ್ ಎಂಬ ಆಂಟಿ-ಆಕ್ಸಿಡೆಂಟ್ ಅಂಶಗಳನ್ನು ಹೊಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link