Health Tips: ಹೃದಯದ ಸಮಸ್ಯೆ ಕ್ಯಾನ್ಸರ್ & ಮಲಬದ್ಧತೆಗೆ ಅತ್ತಿ ಹಣ್ಣು ರಾಮಬಾಣ
ಅತ್ತಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಬಹುದು. ಅತ್ತಿ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಅತ್ತಿ ಹಣ್ಣು ಸೇವನೆಯಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಕಂಡುಬರುವ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಅತ್ತಿ ಹಣ್ಣು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತದೆ. ಅತ್ತಿ ಮರದಿಂದ ತೆಗೆದ ರಸವನ್ನು ಔಷಧಿಯಾಗಿ ಸೇವಿಸಿದರೆ ಕ್ಯಾನ್ಸರ್ ಕೋಶಗಳು ನಾಶವಾಗುತ್ತದೆ.
ಅತ್ತಿ ಹಣ್ಣು ಸೇವಿಸುವುದರಿಂದ ಹೃದಯ ಸಮಸ್ಯೆಯಿಂದ ದೂರವಿರಬಹುದು. ಇದರಲ್ಲಿರುವ ಅಂಶ ಅಪಧಮನಿ ಮತ್ತು ಅಭಿದಮನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅತ್ತಿ ಮರದ ತೊಗಟೆಯಿಂದ ಕಷಾಯ ತಯಾರಿಸಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ. ಹೀಗಾಗಿ ಇದು ಮಧುಮೇಹಿಗಳಿಗೆ ಉತ್ತಮ ಔಷಧವಾಗಿದೆ.