Health Tips: ಅಜೀರ್ಣ ಸಮಸ್ಯೆಗೆ ‘ಜೀರಿಗೆʼಯೇ ರಾಮಬಾಣ!
ಅಜೀರ್ಣ ಆರೋಗ್ಯ ಸಮಸ್ಯೆಯು ಬಹುತೇಕರನ್ನು ಕಾಡುವ ಸಾಮಾನ್ಯ ಮತ್ತು ಗಂಭೀರ ಸಮಸ್ಯೆಯಾಗಿದೆ. ಅಜೀರ್ಣ ಎಂದರೆ ನಾವು ತಿಂದ ಆಹಾರವು ಚೆನ್ನಾಗಿ ಜೀರ್ಣವಾಗದಿರುವುದು. ಇದು ವಾಕರಿಕೆ, ಎದೆಯುರಿ, ವಾಂತಿ ಮುಂತಾದ ಲಕ್ಷಣಗಳನ್ನುಂಟು ಮಾಡುತ್ತದೆ.
ನಿಮಗೆ ಕಾಡುವ ಅಜೀರ್ಣ ಸಮಸ್ಯೆಗೆ ಜೀರಿಗೆ ರಾಮಬಾಣವಾಗಿದೆ. ಇದಕ್ಕೆ ಅರ್ಧ ಚಮಚ ಜೀರಿಗೆ ಮತ್ತು ಕಲ್ಲು ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಇದರಿಂದ ಬರುವ ರಸವನ್ನು ಕುಡಿದ್ರೆ ನಿಮ್ಮ ಹೊಟ್ಟೆ ಭಾರ ಕಡಿಮೆಯಾಗುತ್ತದೆ.
ಜೀರಿಗೆಯನ್ನು ಹುರಿದು ಪುಡಿ ಮಾಡಬೇಕು. ಬಳಿಕ ಅದನ್ನು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿದರೂ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಓಂ ಕಾಳು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧ ಲೋಟಕ್ಕೆ ಇಳಿಯುತ್ತಲೇ ಸೋಸಿ ಮಕ್ಕಳಿಗೆ ಕುಡಿಸಿದರೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.
ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಬೆಲ್ಲ, ಹಾಲು ಸೇರಿಸಿ ಕುಡಿಯುವುದರಿಂದ ದೇಹಕ್ಕೂ ತಂಪು ಮತ್ತು ನಿಮಗೆ ಚೈತನ್ಯವೂ ಸಿಗುತ್ತದೆ. ಇದು ರಕ್ತಹೀನತೆಯನ್ನೂ ಕಡಿಮೆ ಮಾಡುತ್ತದೆ.
ಅಸ್ತಮಾ ರೋಗಿಗಳು ಹುರಿದ ಜೀರಿಗೆ ಪುಡಿ ಹಾಕಿದ ಬಿಸಿ ನೀರು ಕುಡಿಯುವುದರಿಂದ ದಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ಜೀರಿಗೆ ಅಜೀರ್ಣ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ನೀಡುತ್ತದೆ.