Health Tips: ಬೇಸಿಗೆಯಲ್ಲಿ ಈ ಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ದಿನವಿಡೀ ಹೈಡ್ರೇಟ್ ಆಗಿರಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶವಿದೆ. ಶೇ.92ರಷ್ಟು ನೀರಿನಂಶ ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್ C, B6, B1 ಮತ್ತು ಲಿಕೋಪಿನ್ ಅಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮಕ್ಕೂ ಉತ್ತಮ.
ಪಪ್ಪಾಯಿ ಹಣ್ಣು ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಆರೈಕೆಗೂ ಉತ್ತಮ. ಡ್ರೈ ಸ್ಕಿನ್ ಸಮಸ್ಯೆಗೆ ಈ ಹಣ್ಣು ಉತ್ತಮ. ಈ ಹಣ್ಣಿನಲ್ಲಿ ವಿಟಮಿನ್ A, B ಮತ್ತು C ಇದೆ. ಇದರ ಜೊತೆಗೆ ಪೊಟಾಷಿಯಂ, ಮ್ಯಾಂಗನೀಸ್ ಹಾಗೂ ತಾಮ್ರದ ಅಂಶ ಸಮೃದ್ಧವಾಗಿದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ C ಹೇರಳವಾಗಿದೆ. ಇದು ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು, ಚರ್ಮದ ಆರೋಗ್ಯಕ್ಕೆ ಸಹಕಾರಿ. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ C ಮೊಡವೆ ಸಮಸ್ಯೆಗೆ ಮುಕ್ತಿ ನೀಡಿ ನಿಮಗೆ ಕಾಂತಿಯುತ ಚರ್ಮವನ್ನು ನೀಡುತ್ತದೆ.
ಮಾವಿನ ಹಣ್ಣನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಹಣ್ಣಿನಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ C, A, B6, K, E, ಪೊಟಾಶಿಯಂ, ಮ್ಯಾಂಗನೀಸ್ ಹಾಗೂ ತಾಮ್ರದ ಅಂಶಗಳು ಹೇರಳವಾಗಿವೆ.
ಕಿವಿ ಹಣ್ಣು ವಿಟಮಿನ್ C ಯಿಂದ ಸಮೃದ್ಧವಾಗಿದೆ. ಇದರಲ್ಲಿ ಕೊಲಜಿನ್ ಉತ್ಪಾದಿಸುವ ಅಂಶವಿದ್ದು, ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಕರಿಸುತ್ತದೆ. ಕಿವಿಹಣ್ಣು ತಿನ್ನುವುದು ದೇಹದ ಆರೋಗ್ಯಕ್ಕೆ ಉತ್ತಮ.