Health benefits of curd: ಮೊಸರು ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Sat, 12 Aug 2023-1:59 pm,

ಮೊಸರಿನಲ್ಲಿ ಕ್ಯಾಲ್ಸಿಯಂ, ರಿಬೋಫ್ಲಾವಿನ್, ಪ್ರೋಟೀನ್, ವಿಟಮಿನ್ B ಮುಂತಾದ ಪೋಷಕಾಂಶಗಳಿವೆ. ನೀವು ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಡಲು ಬಯಸಿದರೆ, ಖಂಡಿತ ಮೊಸರು ಸೇವಿಸಬೇಕು. ಮೊಸರು ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ.

ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಇದು ಸಹಾಯಕ. ನೀವು ಕಡಿಮೆ ಹಸಿವನ್ನು ಅನುಭವಿಸಿದರೂ ಅದನ್ನು ಸೇವಿಸಬಹುದು. ನಿಮಗೆ ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ ಮೊಸರು ಸೇವಿಸಬೇಕು.

ಮೊಸರನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ಊಟದಲ್ಲಿ ಮಾತ್ರ ಸೇವಿಸಬೇಕು. ರಾತ್ರಿ ಮೊಸರು ಸೇವಿಸುವುದರಿಂದ ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಂಪಾಗಿರುವ ಮೊಸರಿನ ಬಳಕೆಯೂ ಅಷ್ಟು ಒಳ್ಳೆಯದಲ್ಲ. ಹೀಗಾಗಿ ಮೊಸರನ್ನು ಸರಿಯಾದ ವೇಳೆಯಲ್ಲಿ ಸೇವಿಸಿದ್ರೆ ನೀವು ಆರೋಗ್ಯಕರ ಲಾಭ ಪಡೆಯಬಹುದು.  

ಮೊಸರು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ದೇಹಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದ ಕೊಲೆಸ್ಟ್ರಾಲ್ ತಗ್ಗಿಸಿ ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ಸದೃಢವಾಗಿಸುತ್ತದೆ.

ನಿತ್ಯ ಮೊಸರು ಸೇವಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಮೊಸರು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ. ಬೆಳೆಯುತ್ತಿರುವ ಮಕ್ಕಳಿರುವ ಮನೆಯಲ್ಲಿ ನಿತ್ಯ ಮೊಸರು ಬಳಕೆ ಕಡ್ಡಾಯಗೊಳಿಸಬೇಕು. ಇದರಿಂದ ಮಕ್ಕಳಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ  ಸಲಹೆ ಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link