Health Tips: ಹೊಟ್ಟೆನೋವಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದುಗಳು ಇಲ್ಲಿವೆ
ನಿಂಬೆ ಹಣ್ಣಿನಲ್ಲಿ ವಿಟಮಿನ್ ʼCʼ ಅಂಶ ಹೆಚ್ಚಾಗಿದೆ. ಇದು ಪ್ರಬಲ ಆಂಟಿ-ಆಕ್ಸಿಡೆಂಟ್ ಆಗಿದ್ದು, ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಜ್ಯೂಸ್ ಸೇವಿಸಬೇಕು.
ನಿಂಬೆರಸಕ್ಕೆ ಸ್ವಲ್ಪ ಪುದೀನಾ ರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ.
ಹೊಟ್ಟೆ ನೋವು ಬಂದಾಗ ದ್ರವ ಪದಾರ್ಥಗಳು ಅಂದರೆ ಆರೋಗ್ಯಕರ ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನೋವು ಶಮನಗೊಳ್ಳುತ್ತದೆ.
ಹೊಟ್ಟೆನೋವು ಬಂದ ಸಂದರ್ಭದಲ್ಲಿ ಚಾಕೋಲೇಟ್ ಹಾಗೂ ಡೈರಿ ಪದಾರ್ಥಗಳನ್ನು ತಿನ್ನಬಾರದು. ಇಂತಹ ಪದಾರ್ಥಗಳನ್ನು ತಿಂದಾಗ ಅಜೀರ್ಣ ಸಮಸ್ಯೆ ಎದುರಾಗಿ ನೋವು ಮತ್ತಷ್ಟು ಉಲ್ಭಣಗೊಳ್ಳುತ್ತದೆ.
ಹೊಟ್ಟೆನೋವಿನ ಸಮಸ್ಯೆ ಬರಬಾರದು ಎಂದರೆ ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಆರೋಗ್ಯಕರ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಆರೋಗ್ಯಕರ ಆಹಾರ ಸೇವಿಸುವುದರಿಂದ ಹೊಟ್ಟೆ ಸೇರಿದಂತೆ ದೇಹದ ಸಮಗ್ರ ಆರೋಗ್ಯವೂ ಚೆನ್ನಾಗಿರುತ್ತದೆ.