Health Tips: ಅನ್ನ ತಿಂದರೂ ದಪ್ಪ ಆಗದ ಹಾಗೆ ನೋಡಿಕೊಳ್ಳುವುದು ಹೇಗೆ?
ಬಾಸ್ಮತಿ, ಜಾಸ್ಮಿನ್ ಅಕ್ಕಿಯನ್ನು ಆರಿಸಿ, ಇವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ನಿಧಾನ ಮತ್ತು ಸ್ಥಿರವಾದ ಏರಿಕೆಗೆ ಕಾರಣವಾಗುವುದರ ಜೊತೆಗೆ ಬೇಗನೆ ಹಸಿವು ಕೂಡ ಆಗುವುದಿಲ್ಲ.
ನೀವು ಎಷ್ಟು ಅನ್ನ ತಿನ್ನುತ್ತೀರಿ ಎನ್ನುವುದು ಬಹಳ ಮುಖ್ಯವಾಗಿದೆ. ಸಣ್ಣ ಬೌಲ್‌ಗಳು ಅಥವಾ ಪ್ಲೇಟ್‌ಗಳನ್ನು ಬಳಸಬೇಕು. ಇವುಗಳು 100-150 ಕ್ಯಾಲೊರಿಗಳನ್ನು ಹೊಂದಿದ್ದು, ನಿಮಗೆ ಅನ್ನ ತಿಂದ ನಂತರ ಹೆಚ್ಚು ಭಾರ ಎನಿಸುವುದಿಲ್ಲ.
ಅನ್ನವನ್ನು ಚಿಕನ್ ಗ್ರಿಲ್, ಮೀನು, ತೋಫು ಅಥವಾ ಕಾಳುಗಳೊಂದಿಗೆ ತಿಂದಾಗ ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಅನ್ನದ ಜೊತೆಗೆ ವಿವಿಧ ರೀತಿಯ ತರಕಾರಿಗಳನ್ನು ಸೇರಿಸಿ ತಿನ್ನುವುದರಿಂದ, ಸುವಾಸನೆ ಮತ್ತು ಹಲವು ಪೌಷ್ಠಿಕಾಂಶಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳೂ ದೊರಕುತ್ತವೆ. ಅಕ್ಕಿಯನ್ನು ಹೆಚ್ಚು ಹುರಿಯುವುದು ಹಾಗೂ ಅತಿಯಾದ ಎಣ್ಣೆಯಿಂದ ಬೇಯಿಸುವುದನ್ನು ತಪ್ಪಿಸಬೇಕು. ಹಬೆಯಲ್ಲಿ ಬೇಯಿಸುವುದು, ಕುದಿಸುವುದು ಅಥವಾ ಅಕ್ಕಿ ಕುಕ್ಕರ್ ಅನ್ನು ಬಳಸುವುದು ಆರೋಗ್ಯಕರ ಅಡುಗೆ ವಿಧಾನಗಳಾಗಿವೆ.
ಅನ್ನವನ್ನು ಬೆಳಗ್ಗೆ ಸೇವಿಸುವುದರಿಂದ ನಿಮಗೆ ದಿನವಿಡೀ ಶಕ್ತಿ ದೊರೆಯುತ್ತದೆ. ಕ್ಯಾಲೊರಿಗಳನ್ನು ಬರ್ನ್ ಮಾಡಲು ದಿನವಿಡೀ ಸಾಕಷ್ಟು ಸಮಯ ದೊರಕುತ್ತದೆ. ಆದರೆ, ಹೆಚ್ಚುವರಿ ಕ್ಯಾಲೊರಿ ಸಂಗ್ರಹವನ್ನು ತಡೆಯಲು ರಾತ್ರಿ ಹೊತ್ತು ಅನ್ನ ಸೇವನೆ ಕಡಿಮೆ ಮಾಡಬೇಕು.