Health Tips: ಈ ಸಿಂಪಲ್ ಸಲಹೆ ಪಾಲಿಸಿದ್ರೆ ನೀವು 70 ವಯಸ್ಸಿನಲ್ಲೂ ಫಿಟ್ ಆಗಿರುತ್ತೀರಿ
ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ ಹಾಗೂ ಜೀವನಶೈಲಿಯು ವಿಭಿನ್ನ ಮತ್ತು ಅನಾರೋಗ್ಯಕರವಾಗಿದೆ. ಹೀಗಾಗಿ ಅವರು ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ.
70ರ ಹರೆಯದಲ್ಲೂ ನೀವು ಫಿಟ್ ಆಗಿರಲು ಬಯಸಿದರೆ, ನೀವು ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು. ನೀವು ಯಾವಾಗಲೂ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಉತ್ತಮ ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ನೀವು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು.
ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರತಿದಿನವೂ ನೀವು ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದಲ್ಲದೆ ದೈಹಿಕವಾಗಿ ಸಕ್ರಿಯವಾಗಿರಲು, ನೀವು ಪ್ರತಿದಿನ ವ್ಯಾಯಾಮ ಮಾಡಬೇಕು.
ನೀವು ಆರೋಗ್ಯವಾಗಿರಬೇಕೆಂದರೆ ಪ್ರತಿದಿನವೂ ಡ್ರೈಫ್ರೂಟ್ಸ್‌ಗಳನ್ನು ಸೇವಿಸಬೇಕು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಹಣ್ಣುಗಳನ್ನು ಸಹ ಸೇವಿಸಬೇಕು. ಇದು ನಿಮ್ಮನ್ನು ಎಲ್ಲಾ ರೋಗಗಳಿಂದ ದೂರವಿಡುತ್ತದೆ.
ಸದಾ ಆರೋಗ್ಯವಾಗಿರಬೇಕು ಅಂದ್ರೆ ನೀವು ಒತ್ತಡರಹಿತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಹಾರ ಸೇವನೆ, ಕನಿಷ್ಠ 8 ಗಂಟೆಗಳಷ್ಟು ನಿದ್ರೆ ಹಾಗೂ ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವುದನ್ನು ರೂಢಿಸಿಕೊಂಡರೆ ನೀವು ಆರೋಗ್ಯವಾಗಿರಬಹುದು.