Pumpkin Health Benefits: ಕುಂಬಳಕಾಯಿ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
ಕುಂಬಳಕಾಯಿ ಸೇವನೆಯಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಮ್ಮು, ಶೀತ ಮತ್ತು ಹವಾಮಾನದ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಅನೇಕ ಅನಾರೋಗ್ಯ ಸಮಸ್ಯೆಗೆ ಕುಂಬಳಕಾಯಿ ರಾಮಬಾಣ.
ಕುಂಬಳಕಾಯಿಯಲ್ಲಿ ಕಬ್ಬಿಣಾಂಶವು ಹೇರಳವಾಗಿದ್ದು, ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಕುಂಠಿತ ಶಕ್ತಿಯ ಮಟ್ಟ, ತಲೆತಿರುಗುವಿಕೆ, ಹಳದಿ ಚರ್ಮ ಮತ್ತು ಉಗುರುಗಳ ಸಮಸ್ಯೆಗಳನ್ನು ಕುಂಬಳಕಾಯಿ ನಿವಾರಿಸುತ್ತದೆ.
ಕುಂಬಳಕಾಯಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕುಂಬಳಕಾಯಿ ಮತ್ತು ಬೀಜಗಳಲ್ಲಿ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿವೆ. ಇವು ಅನೇಕ ಸೋಂಕಿನ ಸಮಸ್ಯೆಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ವೃದ್ಧಿಗೆ ಸಹಕಾರಿ.
ಕುಂಬಳಕಾಯಿಯಲ್ಲಿ ನಾರಿನಂಶ ಹೆಚ್ಚಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಕೊಬ್ಬು ಕಂಡು ಬರುವುದಿಲ್ಲ. ಇದರಲ್ಲಿರುವ ಫೈಬರ್ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.
ಕುಂಬಳಕಾಯಿಯಲ್ಲಿ ವಿಟಮಿನ್ A, E, C ಮತ್ತು ಐರನ್ ಅಂಶ ಸಮೃದ್ಧವಾಗಿದೆ. ಶೀತ-ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಸಮಸ್ಯೆಗೆ ಕುಂಬಳಕಾಯಿ ಉತ್ತಮ ಮನೆಮದ್ದು.