Watermelon Seeds Benefits: ಕಲ್ಲಂಗಡಿ ಬೀಜದ ಅದ್ಭುತ ಆರೋಗ್ಯ ಪ್ರಯೋಜನಗಳು
ಬಹುತೇಕ ಜನರು ಕಲ್ಲಂಗಡಿ ಹಣ್ಣು ಸೇವಿಸಿದ ಬಳಿಕ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳು, ಒಮೆಗಾ 3, ಜಿಂಕ್ ಮತ್ತು ಫ್ಯಾಟಿ ಆಸಿಡ್ ಮುಂತಾದವು ಹೇರಳವಾಗಿವೆ.
ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚುತ್ತದೆ, ಇದರಿಂದಾಗಿ ಪುರುಷರ ಫಲವತ್ತತೆ ಸುಧಾರಿಸುತ್ತದೆ. ಕಲ್ಲಂಗಡಿ ಸಿಟ್ರುಲಿನ್ ಹೊಂದಿದ್ದು, ಇದು ಅರ್ಜಿನೈನ್ ಆಗಿ ಬದಲಾಗುತ್ತದೆ. ಉತ್ತಮ ರಕ್ತದ ಹರಿವನ್ನು ಉತ್ತೇಜಿಸಲು ರಕ್ತನಾಳಗಳನ್ನು ಹಿಗ್ಗಿಸಲು ಈ ಅಂಶವು ಕಾರಣವಾಗಿದೆ.
ಕಲ್ಲಂಗಡಿ ಬೀಜಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧ ಶಕ್ತಿ ಹೆಚ್ಚುತ್ತದೆ. ಇವು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿವೆ. ಸೋಂಪಾದ ಕೂದಲು ಬೆಳೆಯಲು ಕಲ್ಲಂಗಡಿ ಬೀಜಗಳನ್ನು ಸೇವಿಸಬೇಕು.
ಕಲ್ಲಂಗಡಿ ಬೀಜಗಳು ಚರ್ಮದ ಆರೋಗ್ಯಕ್ಕೆ ಉತ್ತಮ ಔಷಧಿ. ಕಲ್ಲಂಗಡಿ ಬೀಜಗಳ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇವು ಮೆದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ.
ಕಲ್ಲಂಗಡಿ ಬೀಜಗಳ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇವುಗಳ ಸೇವನೆಯಿಂದ ಪುರುಷರ ಫಲವತ್ತತೆ ಹೆಚ್ಚುತ್ತದೆ. ಹೃದಯದ ಆರೋಗ್ಯವೂ ಕೂಡ ಉತ್ತಮವಾಗುತ್ತದೆ.