Health Tips: ಹೆಚ್ಚು ಆಲೂಗಡ್ಡೆ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?
ಆಲೂಗಡ್ಡೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಲೂಗಡ್ಡೆಯಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ, ತಾಮ್ರ, ಕ್ಯಾಲ್ಷಿಯಂ, ಸತು ಮುಂತಾದ ಅಂಶವಿದ್ದು, ಇದು ದೇಹಕ್ಕೆ ಕಬ್ಬಿಣದ ಅಂಶವನ್ನೂ ಒದಗಿಸುತ್ತದೆ. ಆಲೂವಿನಲ್ಲಿ ವಿಟಮಿನ್ C ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಲು ಸಹಕಾರಿ.
ವಾರಕ್ಕೆ 2 ಬಾರಿಯಾದರೂ ಆಲೂಗಡ್ಡೆಯನ್ನು ಬೇಯಿಸಿ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದರೆ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ದೊರೆಯುತ್ತದೆ. ಆದರೆ ಅತಿಯಾಗಿ ಆಲೂಗಡ್ಡೆ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಸೇವಿಸಿದರೆ ಬೊಜ್ಜಿನ ಸಮಸ್ಯೆ ಬರಬಹುದು ಮತ್ತು ಮಧುಮೇಹಕ್ಕೂ ಇದು ಕಾರಣವಾಗಬಹುದು. ಆಲೂಗಡ್ಡೆಯನ್ನು ಅತಿಯಾಗಿ ತಿಂದರೆ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.
ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ. ಹೀಗಾಗಿ ಸಂಧಿವಾತ ಸಮಸ್ಯೆ ಇರುವ ರೋಗಿಗಳು ಹೆಚ್ಚಾಗಿ ಸೇವಿಸಬಾರದು. ಅತಿಯಾಗಿ ಆಲೂಗಡ್ಡೆ ಸೇವಿಸಿದ್ರೆ ಮಧುಮೇಹಿಗಳ ಸಮಸ್ಯೆ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಆಲೂಗಡ್ಡೆಯಿಂದ ದೂರವಿದ್ದರೆ ಉತ್ತಮ.
ಅತಿಯಾಗಿ ಆಲೂಗಡ್ಡೆ ಸೇವನೆಯಿಂದ ರಕ್ತದೊತ್ತಡ ಸಮಸ್ಯೆ ಹೆಚ್ಚುತ್ತದೆ. ಬಿಪಿ ರೋಗಿಗಳು ಹೆಚ್ಚು ಆಲೂಗಡ್ಡೆ ಸೇವಿಸುವುದು ಸೂಕ್ತವಲ್ಲ. ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ಕ್ಯಾಲೋರಿ ಸಹ ಹೆಚ್ಚಾಗುತ್ತದೆ. ಇದರಿಂದ ಮುಂದೆ ನಿಮ್ಮ ತೂಕ ಹೆಚ್ಚಾಗುತ್ತದೆ.