Lychee fruit health benefits: ಲಿಚ್ಚಿ ಹಣ್ಣು ಸೇವಿಸಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಹೆಚ್ಚಿನ ಪ್ರಮಾಣದಲ್ಲಿ ಲಿಚ್ಚಿ ಹಣ್ಣು ಸೇವಿಸುವುದರಿಂದ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಲಿಚ್ಚಿ ಹಣ್ಣಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಹೇರಳವಾಗಿದೆ. ಹೀಗಾಗಿ ನಮ್ಮ ದೇಹದಲ್ಲಿರುವ ಬೇಡದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಲಿಚ್ಚಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರ ಸೇವನೆಯಿಂದ ನೀವು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಲಿಚ್ಚಿ ಹಣ್ಣನ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ C, ಆಲಿಗೊನಾಲ್ ಮತ್ತು ಪಾಲಿಫಿನಾಲ್‌ಗಳ ಸಮೃದ್ಧ ಮೂಲವಾಗಿದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಿ ಮೃದ ತ್ವಚೆಯನ್ನು ನೀಡುತ್ತದೆ. ಲಿಚ್ಚಿ ಉರಿಯೂತದ ಚರ್ಮ ಮತ್ತು ಮೊಡವೆಗೆ ರಾಮಬಾಣವಾಗಿದೆ.
ಲಿಚ್ಚಿ ಹಣ್ಣು ಸೇವಿಸುವುದರಿಂದ ನೀವು ಉತ್ತಮ ಕೂದಲು ಪಡೆಯಬಹುದು. ದುರ್ಬಲ ಕೂದಲಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ತಾಮ್ರದ ಪೆಪ್ಟೈಡ್‌ಗಳು ಕೂದಲು ಕೋಶಕ ಹಿಗ್ಗುವಿಕೆಗೆ ಸಹಕಾರಿ. ಲಿಚ್ಚಿಯಲ್ಲಿರುವ ವಿಟಮಿನ್ ಸಿ ಕೂದಲು ಕಿರುಚೀಲಗಳಿಗೆ ಹೆಚ್ಚಿನ ರಕ್ತ ಪೂರೈಕೆ ನೀಡುತ್ತದೆ. ಲಿಚ್ಚಿ ಕೂದಲಿನ ಹೊಳಪು ಹೆಚ್ಚಿಸುತ್ತದೆ.
ಲಿಚ್ಚಿ ಹಣ್ಣಿನಲ್ಲಿ ಶಕ್ತಿಯುತ ರೋಗ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇದರ ಸೇವನೆಯಿಂದ ಮಹಿಳೆಯರ ಸ್ತನ ಕ್ಯಾನ್ಸರ್‍ನಿಂದ ಮುಕ್ತಿ ಪಡೆಯಬಹುದು. ಇದು ಹೃದಯವನ್ನು ಆರೋಗ್ಯವಾಗಿಡಲು ತುಂಬಾ ಸಹಕಾರಿಯಾಗಿದೆ.
ಲಿಚ್ಚಿ ಹಣ್ಣಿನ ಎಲೆ ಮೂತ್ರಪಿಂಡದ ಕಲ್ಲು ಕರಗಿಸಲು ಸಹಕಾರಿ. ಲಿಚ್ಚಿ ಎಲೆಗಳು ಯೂರಿಕ್ ಆಮ್ಲ ಮತ್ತು ಕ್ರಿಯೇಟಿನೈನ್ ಅಂಶ ಕಡಿಮೆ ಮಾಡುವ ಮೂಲಕ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತವೆ.