Muskmelon Health Benefits: ಕರ್ಬೂಜ ಹಣ್ಣು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

Sat, 11 May 2024-2:13 pm,

ಬೇಸಿಗೆಯಲ್ಲಿ ಜನರು ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿದೆ. ಈ ಸಮಯದಲ್ಲಿ ಜನರು ನೀರಿನ ಕೊರತೆಯನ್ನು ಎದುರಿಸುತ್ತಾರೆ. ನೀವು ನೀರಿನ ಕೊರತೆಯನ್ನು ಎದುರಿಸುತ್ತಿದ್ದರೆ, ಅದನ್ನು ನೀಗಿಸಲು ನೀವು ಪ್ರತಿದಿನ ಕರ್ಬೂಜ ಹಣ್ಣು ಸೇವಿಸಬೇಕು ಎಂದು ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಹೇಳಿದ್ದಾರೆ. ಇದರಲ್ಲಿ ಉತ್ತಮ ಪ್ರಮಾಣದ ನೀರು ಕಂಡುಬರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನೀವು ಹೆಚ್ಚಾಗಿ ಕರ್ಬೂಜ ಹಣ್ಣು ಸೇವಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. 

ಪ್ರತಿನಿತ್ಯ ಕರ್ಬೂಜ ಹಣ್ಣನ್ನು ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ಪರಿಹಾರ ಪಡೆಯಬಹುದು. ಫೋಲಿಕ್ ಆಮ್ಲವು ಕರ್ಬೂಜದಲ್ಲಿ  ಕಂಡುಬರುತ್ತದೆ, ಇದು ನಿಮ್ಮ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ. ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ಸೇವಿಸಬೇಕು. 

ಬೇಸಿಗೆಯಲ್ಲಿ ಜನರು ಹೆಚ್ಚು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರೆ. ಇದರಿಂದ ಜನರು ತಮ್ಮ ಆರೋಗ್ಯದ ಬಗ್ಗೆ ತೀವ್ರ ಆತಂಕದಲ್ಲಿರುತ್ತಾರೆ. ಈ ಋತುವಿನಲ್ಲಿ ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಸೇವಿಸುವುದು ತುಂಬಾ ಅಪಾಯಕಾರಿ. ಅನೇಕ ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಲಘು ಆಹಾರ ಸೇವನೆ ನಿಮಗೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ನೀವು ನಿಯಮಿತವಾಗಿ ಕರ್ಬೂಜ ಹಣ್ಣು ಸೇವಿಸಬೇಕು. 

ಕರ್ಬೂಜ ಹಣ್ಣು ಸೇವನೆಯಿಂದ ಕಣ್ಣಿನ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ವಿಟಮಿನ್ ʼಎʼ, ಬೀಟಾ-ಕ್ಯಾರೋಟಿನ್ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿರಿಸುತ್ತದೆ. ನೀವು ಇದನ್ನು ಪ್ರತಿದಿನ ಸೇವಿಸಬೇಕು. ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡಲು ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ.

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ತುಂಬಾ ತೊಂದರೆಗೀಡಾಗಿರುತ್ತಾರೆ. ಇದರಿಂದ ಪರಿಹಾರ ಪಡೆಯಲು ಅನೇಕರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿನಿತ್ಯ ಕರ್ಬೂಜ ಹಣ್ಣನ್ನು ಸೇವಿಸಿದರೆ ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮನೆಮದ್ದುಗಳ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಇದಕ್ಕೆ Zee Kannada News ಯಾವುದೇ ರೀತಿ ಹೊಣೆಯಾಗಿರುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link