Health Tips: ಶೀತ ಮತ್ತು ಕೆಮ್ಮು ಕಡಿಮೆ ಮಾಡಲು ಪವರ್‌ಫುಲ್ ಮನೆಮದ್ದುಗಳು
ಶುಂಠಿ, ಮೆಣಸು ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಕುಡಿದರೆ ಪರಿಹಾರ ಸಿಗುತ್ತದೆ.
ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ತಿನ್ನುವುದರಿಂದ ಶೀತ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು.
ಬಿಸಿ ನೀರಿಗೆ ಅರಿಶಿನ ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಉಗಿ ತೆಗೆದುಕೊಳ್ಳುವುದರಿಂದ ಶೀತ ಮತ್ತು ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.
ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಬೇಕು. ಇದಲ್ಲದೆ ಬೆಳ್ಳುಳ್ಳಿಯನ್ನು ಅಗಿಯುವುದರಿಂದಲೂ ಶೀತವನ್ನು ಕಡಿಮೆ ಮಾಡಬಹುದು.
ಬೆಳಗ್ಗೆ ಶುಂಠಿ ಚಹಾವನ್ನು ಸೇವಿಸುವುದರಿಂದಲೂ ನೀವು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ಪಡೆಯಬಹುದು.