Home Remedies: ಪುರುಷರ ಆ ʼಶಕ್ತಿʼಯನ್ನು ಡಬಲ್ ಮಾಡುತ್ತೆ ಈ ಪವರ್‌ಫುಲ್ ಔಷಧ!
ಅಶ್ವಗಂಧವನ್ನು ಹಾಲಿನಲ್ಲಿ ಬೇಯಿಸಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಬೆನ್ನುನೋವಿನ ಸಮಸ್ಯೆ ಗುಣಮುಖವಾಗುತ್ತದೆ.
ಅಶ್ವಗಂಧದ ಬೇರನ್ನು ಕುಟ್ಟಿ ಪುಡಿ ಮಾಡಿ ಹಾಲಿನಲ್ಲಿ ಅಥವಾ ಜೇನು ತುಪ್ಪದಲ್ಲಿ ಬೆರೆಸಿಕೊಂಡು ಸೇವಿಸಿದರೆ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ.
ಅಶ್ವಗಂಧ ಮತ್ತು ಶತಾವರಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕಷಾಯ ಮಾಡಿ, ಹಾಲು ಬೆರೆಸಿ ಕುಡಿಯುವುದರಿಂದ ಲೈಂಗಿಕ ಸಮಸ್ಯೆ ನಿವಾರಣೆಯಾಗುತ್ತದೆ.
ಒಂದು ಚಮಚ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಬೆಳಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಎದುರಾಗುವ ತೊಂದರೆಗಳು ಶಮನವಾಗುತ್ತವೆ.
ಅಶ್ವಗಂಧವನ್ನು ಲೈಂಗಿಕ ದೌರ್ಬಲ್ಯಕ್ಕೆ ಉತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಇದರ ಪುಡಿಯನ್ನು ಹಾಲಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಪುರುಷರ ಲೈಂಗಿಕ ದೌರ್ಬಲ್ಯವು ದೂರವಾಗುತ್ತದೆ.