Almonds Side Effects: ಅತಿಯಾಗಿ ಬಾದಾಮಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ಬಾದಾಮಿಯು ಬಹಳಷ್ಟು ವಿಟಮಿನ್ ‘ಇ’ ಹೊಂದಿರುತ್ತದೆ. ನೀವು ಈಗಾಗಲೇ ವಿಟಮಿನ್ ‘ಇ’ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ವಿಟಮಿನ್ ‘ಇ’ ಸಮೃದ್ಧವಾಗಿರುವ ಆಹಾರ ಸೇವಿಸುತ್ತಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಬಾದಾಮಿಯಲ್ಲಿರುವ ನಾರಿನಂಶವನ್ನು ಅತಿಯಾಗಿ ತಿಂದರೆ ಗ್ಯಾಸ್ ಉಂಟಾಗಬಹುದು. ಇದಲ್ಲದೆ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಡಬಹುದು.
ಅತಿಯಾಗಿ ಬಾದಾಮಿ ತಿನ್ನುವುದರಿಂದ ನಿಮಗೆ ವಾಕರಿಕೆ, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆಯಂತಹ ಜಠರಗರುಳಿನ ಸಮಸ್ಯೆ ಕಾಡುತ್ತವೆ.
ಹೆಚ್ಚಿನ ಪ್ರಮಾಣದ ಬಾದಾಮಿ ಸೇವನೆಯಿಂದ ನಿಮ್ಮ ತೂಕ ಹೆಚ್ಚಾಗಬಹುದು ಮತ್ತು ಬೊಜ್ಜು ಸಹ ಉಂಟಾಗುತ್ತದೆ. ಬಾದಾಮಿಯು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಆದರೆ ಮಿತಿಮೀರಿದ ಬಾದಾಮಿ ಸೇವನೆಯು ಅಲರ್ಜಿಗೆ ಕಾರಣವಾಗಬಹುದು.
ಅತಿಯಾಗಿ ಬಾದಾಮಿ ಸೇವನೆಯಿಂದ ಮಲಬದ್ಧತೆ, ತೂಕ ಹೆಚ್ಚಾಗುವುದು, ಅತಿಸಾರ, ಆಹಾರ ನುಂಗಲು ತೊಂದರೆ, ವಾಂತಿ, ತೀವ್ರ ತುರಿಕೆ ಸಹ ಉಂಟಾಗಬಹುದು.