ಫ್ರಿಡ್ಜ್‌ನಲ್ಲಿ ಕಲಸಿದ ಚಪಾತಿ ಹಿಟ್ಟು ಇಡುವ ಮುನ್ನ ಎಚ್ಚರ; ತಪ್ಪದೇ ಈ ವಿಷಯ ತಿಳಿದುಕೊಳ್ಳಿರಿ
ಅನೇಕರು ಕಲಸಿದ ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ರೀತಿ ಮಾಡುವುದು ತಪ್ಪು ಎಂದು ಆರೋಗ್ಯ ತಜ್ನರು ಎಚ್ಚರಿಕೆ ನೀಡಿದ್ದಾರೆ. ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಏಕೆ ಇಡಬಾರದು ಅಂತಾ ತಿಳಿಯಿರಿ..
ಮಿಕ್ಸ್ ಮಾಡಿದ ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅನೇಕ ಬ್ಯಾಕ್ಟಿರಿಯಾಗಳು ಹರಡುತ್ತವೆ. ಇದರಿಂದ ನಿಮಗೆ ಜೀರ್ಣಕ್ರಿಯೆ, ಹೊಟ್ಟೆ ನೋವು, ಮಲಬದ್ಧತೆ, ಆಸಿಡಿಡಿ ಸೇರಿದಂತೆ ಹಲವು ಸೋಂಕುಗಳು ಹರಡುತ್ತವೆ.
ಚಪಾತಿ ಹಿಟ್ಟಿನಲ್ಲಿ ದೇಹಕ್ಕೆ ಉತ್ತಮವಾದ ಪೋಷಕಾಂಶಗಳಿವೆ. ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದರ ಪೋಷಕಾಂಶಗಳು ನಾಶವಾಗುತ್ತವೆ. ಆ ಹಿಟ್ಟಿನಿಂದ ಚಪಾತಿ ಮಾಡಿದರೆ ವ್ಯರ್ಥ, ಜೊತೆಗೆ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ.
ಫ್ರಿಡ್ಜ್‌ನಲ್ಲಿ ಹಾಲು, ಹಣ್ಣು, ತರಕಾರಿ ಜೊತೆಗೆ ಮಾಡಿದ ಅಡುಗೆ ಹಾಳಾಗದಂತೆ ಇಡುತ್ತವೆ. ಕೆಲವರು ಯಾವಾಗಲೂ ಅನಗತ್ಯ ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದರಲ್ಲಿ ಚಪಾತಿಯೂ ಒಂದು. ಆದರೆ ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಚಪಾತಿ ಹಿಟ್ಟನ್ನು ಕಲಸಿ ಫ್ರಿಡ್ಜ್‌ನಲ್ಲಿಟ್ಟರೆ ಮೃದುವಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಇದರಿಂದ ಚಪಾತಿಯ ರುಚಿಯೂ ಸಹ ಬದಲಾಗುತ್ತದೆ.
ಚಪಾತಿ ಹಿಟ್ಟನ್ನು ಬಾಕ್ಸ್‌ನಲ್ಲಿಟ್ಟು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಈ ರೀತಿ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಹಿಟ್ಟು ಕೆಡುವುದಲ್ಲದೆ, ಅದನ್ನು ತಿನ್ನುವುದರಿಂದ ಆರೋಗ್ಯವೂ ಹಾಳಾಗುತ್ತದೆ. ಹೀಗಾಗಿ ಕಾಲಕಾಲಕ್ಕೆ ಸ್ವಲ್ಪ ಚಪಾತಿ ಹಿಟ್ಟು ಸೇರಿಸಿ ಬಳಸಬೇಕು.