Health Tips: ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯದ ಕುರಿತು ಹೇಳುತ್ತದೆ ಗೊತ್ತಾ?
1. ನಾಲಿಗೆಯ ಬಣ್ಣ ಈ ರೀತಿಯಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ - ಸಾಮಾನ್ಯವಾಗಿ ನಾಲಿಗೆಯ ಬಣ್ಣ ತಿಳಿಗುಲಾಬಿ ಬಣ್ಣದ್ದಾಗಿರುತ್ತದೆ. ಅದರ ಮೇಲೆ ಸಣ್ಣ ಪ್ರಮಾಣದ ಬಿಳಿ ಬಣ್ಣದ ಲೇಪವಿದ್ದರೂ ಕೂಡ ಚಿಂತಿಸುವ ಅವಶ್ಯಕತೆ ಇಲ್ಲ. ಆದರೆ, ನಿಮ್ಮ ಆಹಾರದ ಕುರಿತು ಗಮನ ಹರಿಸಿ.
2. ಇದು ಹೃದ್ರೋಗಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣ - ನಾಲಿಗೆಯ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ನಿಮಗೆ ಹೃದಯದ ತೊಂದರೆಗಳು (Heart problems) ಉಂಟಾಗಬಹುದು. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡದೆ ಹೋದಲ್ಲಿ ಅಥವಾ ರಕ್ತದಲ್ಲಿನ ಆಮ್ಲಜನಕವು ಕಡಿಮೆಯಾಗಲು ಪ್ರಾರಂಭಿಸಿದಾಗ ನಾಲಿಗೆಯ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಪರಿಸ್ಥಿತಿಯು ಎಚ್ಚರಿಕೆಯ ಗಂಟೆಯಾಗಿದೆ.
3. ಇವು ಕ್ಯಾನ್ಸರ್ ಸಂಕೇತಗಳಾಗಿವೆ - ನಾಲಿಗೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದರೆ ತಕ್ಷಣಕ್ಕೆ ಎಚ್ಚೆತ್ತುಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು. ಆಗಾಗ್ಗೆ ಚೈನ್ ಸ್ಮೋಕರ್ ಗಳಲ್ಲಿ ನಾಲಿಗೆಯ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಸ್ಥಿತಿಯಲ್ಲಿ ಕ್ಯಾನ್ಸರ್ನಂತಹ (Cancer) ಮಾರಕ ಕಾಯಿಲೆಯ ಸಂಕೆತವಿರುತ್ತದೆ. ಹುಣ್ಣು (Ulcer) ಅಥವಾ ಶಿಲೀಂಧ್ರ ಸೋಂಕು (Fungal Infection) ಇದ್ದರೂ, ನಾಲಿಗೆ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
4. ಇವು ಕರುಳಿನ ಕಾಯಿಲೆಯ ಸಂಕೇತಗಳಾಗಿವೆ - ನಾಲಿಗೆ ಬಣ್ಣ ಹಳದಿ ಬಣ್ಣದ್ದಾಗಿದ್ದರೂ ಕೂಡ ಅದನ್ನು ಸಾಮಾನ್ಯ ಎಂದು ಪರಿಗಣಿಸಬಾರರು. ದೇಹದಲ್ಲಿ ಪೌಷ್ಟಿಕ ಅಂಶಗಳ (Nutritious Elements) ಕೊರತೆಯಿದ್ದಾಗ ಆಗಾಗ್ಗೆ ಇದು ಸಂಭವಿಸುತ್ತದೆ. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯಲ್ಲಿನ (Digestive System) ಅಡಚಣೆಯಿಂದಾಗಿ, ನಾಲಿಗೆ ಬಣ್ಣ ಹಳದಿ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಕೃತ್ತು ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.
5. ಇವು ಲ್ಯೂಕೋಪ್ಲಾಕಿಯಾ ಸಂಕೇತಗಳಾಗಿವೆ - ನಾಲಿಗೆಯ ಬಣ್ಣವು ಸಂಪೂರ್ಣವಾಗಿ ಬಿಳಿಯಾಗಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದರರ್ಥ ದೇಹದಲ್ಲಿ ನಿರ್ಜಲೀಕರಣದ (Dehydration)ಸಮಸ್ಯೆ ಇದೆ. ಆಗಾಗ್ಗೆ ಈ ಸಮಸ್ಯೆ ಧೂಮಪಾನದಿಂದಲೂ ಉಂಟಾಗುತ್ತದೆ. ಈ ರೀತಿ ಒಂದು ವೇಳೆ ನಾಲಗೆಯ ಬಣ್ಣ ಬಿಳಿಯಾಗಿದ್ದಾರೆ ಅದು ಲ್ಯುಕೋಪ್ಲಾಕಿಯಾ (Leukoplakia) ಕೂಡ ಇರಬಹುದು. ಹೇಗಾದರೂ, ಕೆಲವೊಮ್ಮೆ ಜ್ವರವಿದ್ದಾಗಲೋ ಕೂಡ ನಾಲಿಗೆ ಒಣಗಲು ಪ್ರಾರಂಭಿಸಿದಾಗ, ಬಣ್ಣವು ಈ ರೀತಿ ಆಗುತ್ತದೆ.