Clove Health Benefits: ಲವಂಗ ಸೇವಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ

Tue, 04 Apr 2023-8:07 pm,

ಲವಂಗವು ದೇಹಕ್ಕೆ ಅಗತ್ಯವಿರುವ ಹಲವಾರು ಪೋಷಕಾಂಶಗಳಿವೆ. ಲವಂಗದಲ್ಲಿ ವಿಟಮಿನ್ C, K, ಫೈಬರ್, ಮ್ಯಾಂಗನೀಸ್, ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು, ರಂಜಕ, ಪೊಟ್ಯಾಸಿಯಮ್, ವಿಟಮಿನ್ A, ಕ್ಯಾಲ್ಸಿಯಂ ಸಮೃದ್ಧವಾಗಿದೆ.

ಆಯುರ್ವೇದ ಔಷಧದಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಲವಂಗವನ್ನು ಬಳಸಲಾಗುತ್ತದೆ. ಲವಂಗವು ಮೂಳೆಗಳನ್ನು ಬಲಪಡಿಸಲು ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಹಕಾರಿ.

ಲವಂಗ ಸೇವನೆಯಿಂದ ಹೃದಯಕ್ಕೆ ಹಾನಿಕಾರಕವಾದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ. ಲವಂಗವು ಯಕೃತ್ತಿನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುವುದಲ್ಲದೆ, ಮಧುಮೇಹಿಗಳಲ್ಲಿ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಉಪಯುಕ್ತವಾಗಿದೆ.

ಲವಂಗದಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ನಿತ್ಯವೂ ಇದನ್ನು ಬಳಸಿದರೆ ಹಲ್ಲು, ವಸಡು ಆರೋಗ್ಯದಿಂದ ಕೂಡಿರುತ್ತದೆ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೆ 2 ಲವಂಗವನ್ನು ಬಾಯಿಗೆ ಹಾಕಿಕೊಂಡರೆ ಆಹಾರ ಬೇಗ ಜೀರ್ಣವಾಗುತ್ತದೆ ಮತ್ತು ಇದರಿಂದ ವಾಕರಿಕೆ ಸಹ ನಿವಾರಣೆಯಾಗುತ್ತದೆ.

ಲವಂಗದಲ್ಲಿ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್‌ಫ್ಲಮೇಟರಿ ಮತ್ತು ಆಂಟಿ ಆಕ್ಸಿಡೆಂಟ್ ಗುಣವಿದ್ದು, ವಸಡು ಮತ್ತು ಬಾಯಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಗರ್ಭಿಣಿಯರು ಲವಂಗವನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಇದನ್ನು ಅತಿಯಾಗಿ ಸೇವಿಸಿದ್ರೆ ಯಕೃತ್, ಕಿಡ್ನಿ ಮತ್ತು ಕಣ್ಣಿನ ಸಮಸ್ಯೆಗಳು ಬರುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link