Ladyfinger Health Benefits: ಬೆಂಡೆಕಾಯಿ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ನಿಯಮಿತವಾಗಿ ಬೆಂಡೆಕಾಯಿ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಂಡೆಕಾಯಿಯಲ್ಲಿರುವ ಪೆಕ್ಟಿನ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಬೆಂಡೆಕಾಯಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಬೆಂಡೆಕಾಯಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಂ ಮತ್ತು ಸೋಡಿಯಂ ಹೊಂದಿದೆ.
ಬೆಂಡೆಕಾಯಿ ಸೇವನೆಯಿಂದ ದೇಹದಲ್ಲಿ ಉತ್ತಮ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಿ ಮಧುಮೇಹ ಬರದಂತೆ ತಡೆಯುತ್ತದೆ. ಬಾಣಂತಿಯರಿಗೆ ಹೆಚ್ಚಿನ ಕಬ್ಬಿಣದ ಅಂಶದ ಅಗತ್ಯವಿದ್ದು, ಇದು ಬೆಂಡೆಕಾಯಿಯಲ್ಲಿ ಹೇರಳವಾಗಿದೆ.
ಬೆಂಡೆಕಾಯಿಯಲ್ಲಿರುವ ಸಮಪ್ರಮಾಣ ಕರುಗುವ ಮತ್ತು ಕರಗದ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಬೆಂಡೆಕಾಯಿ ಸೇವನಿಯಿಂದ ಶ್ವಾಸಕೋಶದ ಶಕ್ತಿ ಹೆಚ್ಚಿತ್ತದೆ ಮತ್ತು ಅಸ್ತಮಾ ವಿರುದ್ದ ಹೋರಾಡಲು ಸಹಕಾರಿ.
ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು, ತೂಕ ನಷ್ಟಕ್ಕೆ ಪ್ರಯೋಜನಕಾರಿ.