Health Tips: ಕಣ್ಣಿನ ದೃಷ್ಟಿ ಹೆಚ್ಚಿಸಲು ಹೆಚ್ಚಾಗಿ ಈ ಆಹಾರ ಸೇವಿಸಿ
ಲುಟೀನ್, ಝೀಕ್ಸಾಂಥಿನ್ ಮತ್ತು ವಿಟಮಿನ್ A ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಕಾರಿ. ನಿಯಮಿತವಾಗಿ ಮೊಟ್ಟೆ ಸೇವಿಸುವುದರಿಂದ ಕಣ್ಣಿನ ಕಾಯಿಲೆಗಳನ್ನು ದೂರವಿಡಬಹುದು.
ಕ್ಯಾರೆಟ್‍ನಲ್ಲಿ ಬೀಟಾ-ಕ್ಯಾರೋಟಿನ್(ವಿಟಮಿನ್ A) ಸಮೃದ್ಧವಾಗಿದೆ. ಇದು ಉತ್ತಮ ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಗಜ್ಜರಿ ತಿನ್ನುವುದರಿಂದ ಕಣ್ಣು ತೀಕ್ಷ್ಣವಾಗುತ್ತದೆ.
ಬಾದಾಮಿಯಲ್ಲಿ ವಿಟಮಿನ್ E ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮ. ವಿಟಮಿನ್ ಇ ವಯಸ್ಸಿಗೆ ಸಂಬಂಧಿಸಿದ ದೃಷ್ಟಿದೋಷ ತಡೆಯಲು ಸಹಕಾರಿ.
ಪಾಲಕ್ ಸೊಪ್ಪಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧವಾಗಿವೆ. ಈ 2 ಉತ್ಕರ್ಷಣ ನಿರೋಧಕಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ. ಈ ಪೋಷಕಾಂಶಗಳು ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ.
ಸಾಲ್ಮನ್ ಮೀನು ಒಮೆಗಾ-3 ಕೊಬ್ಬಿನಾಮ್ಮಗಳ ಉತ್ತಮ ಮೂಲವಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ತಡೆಯಲು ಸಹಕಾರಿ.