Health Tips: ರಾತ್ರಿ ಫ್ಯಾನ್ ಹಾಕಿಕೊಂಡು ಮಲಗುವವರು ಈ ಸುದ್ದಿ ಓದಲೇಬೇಕು
ರಾತ್ರಿ ವೇಳೆ ನಮ್ಮಲ್ಲಿ ಬಹುತೇಕರು ಫ್ಯಾನ್ ಹಾಕಿಕೊಂಡು ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಹೀಗೆ ಫ್ಯಾನ್ ಹಾಕಿ ಮಲಗುವುದರಿಂದ ನಿಮ್ಮ ಬಾಯಿ, ಮೂಗು ಮತ್ತು ಗಂಟಲು ಒಣಗಿ ಕಫದ ಅಧಿಕ ಉತ್ಪಾದನೆಗೆ ಕಾರಣವಾಗುತ್ತದೆ.
ಅಧಿಕ ಕಫ ಉತ್ಪಾದನೆಯಿಂದ ನಿಮಗೆ ಉಸಿರಾಡಲು ಕಷ್ಟವಾಗಬಹುದು. ಇದರಿಂದ ತಲೆನೋವು, ಕಟ್ಟಿದ ಮೂಗು, ಗಂಟಲು ನೋವು ಹಾಗೂ ಗೊರಕೆಯ ಸಮಸ್ಯೆಗೆ ಕಾರಣವಾಗಬಹುದು.
ಫ್ಯಾನ್ ಗಾಳಿಯು ರೂಮ್‌ನಲ್ಲಿನ ಧೂಳನ್ನು ಹರಡಿ ಅಲರ್ಜಿ, ಅಸ್ತಮಾವನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ ಕಾಲಕಾಲಕ್ಕೆ ಫ್ಯಾನ್ ರೆಕ್ಕೆಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಇಲ್ಲದಿದ್ದರೆ ಅದರಲ್ಲಿರುವ ಧೂಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಫ್ಯಾನ್ ಗಾಳಿಯು ವೈರಸ್‌ಗಳನ್ನು ಹರಡಿ ಈಗಾಗಲೇ ಇರುವ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ ರಾತ್ರಿ ಫ್ಯಾನ್ ಹಾಕಿಕೊಂಡು ಮಲಗುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು.
ಫ್ಯಾನ್ ಗಾಳಿಯಲ್ಲಿ ಇಡೀ ರಾತ್ರಿ ಮಲಗುವುದರಿಂದ ಕಣ್ಣುಗಳಲ್ಲಿನ ತೇವ ಆರಿ ಕಣ್ಣುಗಳು ಡ್ರೈ ಎನಿಸಬಹುದು. ಚರ್ಮಗಳು ಕೂಡ ಒಣಗಬಹುದು. ಇದರಿಂದ ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆ ಚರ್ಮದ ಸಮಸ್ಯೆ ನಿರಂತರವಾಗಿ ಕಾಡುತ್ತದೆ. ಫ್ಯಾನ್ ಗಾಳಿ ದೇಹವನ್ನು ನಿರ್ಜಲೀಕರಣ ಆಗುವಂತೆ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಆದಷ್ಟು ಫ್ಯಾನ್ ಗಾಳಿ ತಪ್ಪಿಸುವುದು ಉತ್ತಮ.