Sleep tips: ನಿದ್ದೆ ಮಾಡುವಾಗ ಈ ಸರಳ ಸಲಹೆ ಪಾಲಿಸಿರಿ
ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ನಿದ್ದೆ ಮಾಡುವ ಮೊದಲು ಅಲರಾಂ ಇಟ್ಟುಕೊಳ್ಳಿ. ಯಾಕಂದ್ರೆ ಪ್ರತಿನಿತ್ಯ ನೀವು ಕೆಲವು ಸಮಯ ಮಾತ್ರ ನಿದ್ದೆ ಮಾಡಬೇಕು. ಆ ಸಮಯವನ್ನೇ ಪ್ರತಿನಿತ್ಯ ನೀವು ಪಾಲನೆ ಮಾಡಬೇಕು. 1 ದಿನ ಹೆಚ್ಚು ಕಡಿಮೆಯಾದ್ರೂ ಆರೋಗ್ಯಕ್ಕೆ ತೊಂದರೆ.
ದಿನನಿತ್ಯ 7-8 ಗಂಟೆ ನಿದ್ದೆ ಮಾಡಿದ್ರೆ ಸಾಕು. ಇನ್ನೂ ಮಧ್ಯಾಹ್ನ ಮಲಗಲೇಬೇಕು ಅನ್ನುವವರು 30 ನಿಮಿಷ ನಿದ್ರೆ ಮಾಡಿದ್ರೆ ಸಾಕು. ಮಲಗುವ ಮುನ್ನ ಟೀ- ಕಾಫಿ ಕುಡಿಯುವುದು ಒಳ್ಳೆಯದಲ್ಲ. ಇದು ನಿಮ್ಮ ನಿದ್ರೆಗೆ ಭಂಗ ತರುತ್ತದೆ.
ಮಲಗುವ ಮೊದಲು ನಿಮ್ಮಲ್ಲಿರುವ ಎಲ್ಲಾ ಒತ್ತಡಗಳನ್ನು ದೂರವಿಡಿ. ನಿಮ್ಮಲ್ಲಿ ಒತ್ತಡ ಹೆಚ್ಚಾದ್ರೆ ನಿದ್ರಿಸಲು ಆಗಲ್ಲ. ವ್ಯಾಯಾಮ ಮಾಡುವವರಾದರೆ ಮಲಗುವ 45 ನಿಮಿಷದ ಮೊದಲು ವ್ಯಾಯಾಮ ಮಾಡಬೇಕು.
ಏನಾದರೂ ಆಹಾರ ಸೇವಿಸಿದ ಬಳಿಕವೇ ಮಲಗಿ. ಬರೀ ಹೊಟ್ಟೆಯಲ್ಲಿ ಮಲಗುವುದು ಒಳ್ಳೆಯದಲ್ಲ. ಊಟವಾದ ತಕ್ಷಣ ಯಾವುದೇ ಕಾರಣಕ್ಕೂ ಮಲಗಬಾರದು. 10-15 ನಿಮಿಷ ವಾಕ್ ಮಾಡಿದ ನಂತರ ಮಲಗುವುದು ಉತ್ತಮ.
ನನಗೆ ನಿದ್ದೆ ಬರುವುದಿಲ್ಲವೆಂದು ಮಧ್ಯಪಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಆಹಾರ, ಗಾಳಿ, ನೀರು, ವಸತಿ ಹೇಗೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆಯೋ ಅದೇ ರೀತಿ ನಮಗೆ ನಿದ್ದೆ ಕೂಡ ಮುಖ್ಯ. ಹೀಗಾಗಿ ನಾವು ನಿದ್ರಿಸುವಾಗ ಕೆಲವೊಂದು ನಿಯಮ ಪಾಲಿಸಲೇಬೇಕು.