ನೆಮ್ಮದಿಯ ನಿದ್ರೆ ಬೇಕಿದ್ರೆ ಇಂದೇ ಈ ಫುಡ್ ತಿನ್ನೋದು ನಿಲ್ಸಿ..! ಇಲ್ಲವಾದ್ರೆ ಗಂಭೀರ ಸಮಸ್ಯೆ ಎದುರಾಗಬಹುದು ಹುಷಾರ್!!
ವರದಿಯ ಪ್ರಕಾರ, ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ. ರಾತ್ರಿ ಕಾಫಿ ಸೇವಿಸಿದರೆ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಕೆಫೀನ್‌ನ ಪರಿಣಾಮವು ಆರರಿಂದ ಎಂಟು ಗಂಟೆಗಳವರೆಗೆ ಇರುತ್ತದೆ. ಆದ್ದರಿಂದ ಸಂಜೆ ಮೇಲೆ ಕಾಫಿ ಕುಡಿಯುವುದನ್ನು ನೀವು ತಪ್ಪಿಸಬೇಕು
ರಾತ್ರಿ ವೇಳೆ ಬರ್ಗರ್, ಫ್ರೆಂಚ್ ಫ್ರೈಸ್ ಮುಂತಾದವುಗಳನ್ನು ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ನಿಮಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ಅರಗಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡಬೇಕು. ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
ಚಾಕೊಲೇಟ್‌ನಲ್ಲಿ ಥಿಯೋಬ್ರೊಮಿನ್ ಎಂಬ ಉತ್ತೇಜಕವಿರುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ. ಹೀಗಾಗಿ ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಚಾಕೊಲೇಟ್ ತಿನ್ನಬಾರದು. ನಿಮಗೆ ತಿನ್ನಬೇಕು ಅಂತಾ ಅನಿಸಿದರೂ ಸಹ ಅದನ್ನು ತಪ್ಪಿಸುವುದು ಉತ್ತಮ.
ಸಂಜೆಯ ಊಟದಲ್ಲಿ ಮಸಾಲೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲವು ಹೆಚ್ಚಾಗುತ್ತದೆ. ರಾತ್ರಿ ಊಟದ ಹೊರತಾಗಿ ಮಲಗುವ ಮುನ್ನ ಮಸಾಲೆಯುಕ್ತ ಆಹಾರ ಸೇವಿಸಿದರೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ರಾತ್ರಿಯಿಡೀ ಚಡಪಡಿಕೆ ಇರುತ್ತದೆ. ಹೀಗಾಗಿ ರಾತ್ರಿ ಮಲಗುವ ಮೂರರಿಂದ ನಾಲ್ಕು ಗಂಟೆಗಳ ಮೊದಲು ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಬೇಕು.
ನಿಂಬೆ ಅಥವಾ ಇತರ ಸಿಟ್ರಸ್ ಹಣ್ಣುಗಳು ಆಮ್ಲೀಯವಾಗಿರುತ್ತವೆ. ಇಂತಹ ಹಣ್ಣುಗಳನ್ನು ರಾತ್ರಿ ತಿಂದರೆ ಅಸಿಡಿಟಿ ಹೆಚ್ಚುತ್ತದೆ. ಹೀಗಾಗಿ ರಾತ್ರಿ ಮಲಗುವ ಮೊದಲು ಹುಳಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.
ರಾತ್ರಿಯಲ್ಲಿ ಸೋಡಾ ಅಥವಾ ಇತರ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಇಂತಹ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೆಫೀನ್ ಇರುತ್ತದೆ. ಮಲಗುವ ಮುನ್ನ ಇವುಗಳನ್ನು ಕುಡಿದರೆ ನಿಮಗೆ ನಿದ್ರಾಭಂಗ ಉಂಟಾಗುತ್ತದೆ.