Lemon Juice: ಬೇಸಿಗೆಯಲ್ಲಿ ನಿಂಬೆ ಪಾನಕ ಸೇವಿಸಿ ಆರೋಗ್ಯವಾಗಿರಿ
ಬೆಳಗ್ಗೆ 1 ಲೋಟ ನಿಂಬೆ ಪಾನಕ ಸೇವಿಸಿದ್ರೆ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ನಿಂಬೆ ರಸವು ಪಿತ್ತಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ.
ನಿಂಬೆ ಪಾನಕವು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಯಕೃತ್ತಿಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಪಿತ್ತರಸವನ್ನು ಹೆಚ್ಚಿಸುತ್ತದೆ, ಇದು ಕೊಬ್ಬು ಮತ್ತು ಲಿಪಿಡ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ.
ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ C ಇರುತ್ತದೆ. ಇದು ವಿವಿಧ ರೋಗಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಪ್ರತಿದಿನ 1 ಲೋಟ ನಿಂಬೆ ಪಾನಕವನ್ನು ಸೇವಿಸಿದ್ರೆ ಅನೇಕ ರೋಗಗಳಿಂದ ದೂರವಿರಬಹುದು.
ನಿಂಬೆ ರಸದಲ್ಲಿರಯವ ಫೆವೆಲೊನಾಯ್ಡ್ ಎಂಬ ಸಂಯುಕ್ತವು ದೇಹವನ್ನು ವಿವಿಧ ರೀತಿಯ ಕ್ಯಾನ್ಸರ್‍ನಿಂದ ರಕ್ಷಿಸುತ್ತದೆ. ನಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯಬಹುದು.
ನಿಂಬೆ ಪಾನಕ ಸೇವಿಸುವುದರಿಂದ ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ನಿಯಮಿತವಾಗಿ ನಿಂಬೆ ರಸ ಸೇವಿಸಬೇಕು.