Health Tips: ಕೈ ಮತ್ತು ಬೆರಳುಗಳ ಚರ್ಮದ ಸಿಪ್ಪೆ ಸುಲಿಯಲು ಕಾರಣವೇನು?
ಅತಿಯಾಗಿ ಕೈ ತೊಳೆಯುವುದರಿಂದ ಚರ್ಮದ ತೇವಾಂಶ ಹೋಗಿ ಒಣಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಉಂಟಾಗಿ ಬೆರಳುಗಳ ತುದಿಯಲ್ಲಿ ಸಿಪ್ಪೆ ಏಳುತ್ತದೆ. ಹೀಗಾಗಿ ಆಗಾಗ ಕೈ ತೊಳೆಯಬೇಡಿ, ಒಂದು ವೇಳೆ ಕೈ ತೊಳೆದುಕೊಂಡರೆ ಎಣ್ಣೆ ಹಚ್ಚಿಕೊಳ್ಳಿ.
ಜಮೀನಿನಲ್ಲಿ ಕೆಲಸ ಮಾಡುವವರು ಕೈಗಳ ಚರ್ಮಕ್ಕೆ ಹಾನಿಕಾರಕ ರಾಸಾಯನಿಕ ತಗಲುವುದರಿಂದ ಚರ್ಮದ ಸಿಪ್ಪೆ ಏಳುತ್ತದೆ. ಹೀಗಾಗಿ ಈ ಕೆಲಸ ಮಾಡುವವರು ಕೈಗಳಿಗೆ ಗ್ಲೌಸ್ ಧರಿಸುವುದು ಸೂಕ್ತ. ಕೆಲಸ ಮುಗಿದ ಮೇಲೆ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು.
ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಕೈಗಳನ್ನು ಒಡ್ಡಿಕೊಳ್ಳಬೇಡಿ. ಇದರಿಂದ ಸಹ ಚರ್ಮ ಡ್ರೈ ಆಗಿ ಸಿಪ್ಪೆ ಸುಲಿಯುತ್ತದೆ. ಹೊರಗಡೆ ಹೋಗುವಾಗ ಅಲೋವೆರಾ ಜೆಲ್ ಹಚ್ಚಿದ್ರೆ ಯಾವುದೇ ತೊಂದರೆಯಿರಲ್ಲ.
ಬೆರಳುಗಳನ್ನು ಚೀಪುವುದರಿಂದ ಮತ್ತು ಕೆಲವರು ಒತ್ತಡಕ್ಕೆ ಸಿಲುಕಿ ಬೆರಳುಗಳನ್ನು ಕಚ್ಚುವುದರಿಂದ ಸಿಪ್ಪೆ ಸುಲಿಯುತ್ತದೆ. ಹೀಗಾಗಿ ಈ ಕೆಟ್ಟ ಅಭ್ಯಾಸಗಳನ್ನು ಇಂದಿನಿಂದಲೇ ಬಿಟ್ಟು ಬಿಡುವುದು ಉತ್ತಮ.
ಇವೆಲ್ಲದರ ಹೊರತಾಗಿ ಸನ್‌ಬರ್ನ್, ಸೋರಿಯಾಸಿಸ್, ಅಕ್ರಾಲ್ ಪೀಲಿಂಗ್ ಸ್ಕಿನ್ ಸಿಂಡ್ರೋಮ್‌ನಂತಹ ಅನೇಕ ರೀತಿಯ ಕಾಯಿಲೆಗಳಿಂದಲೂ ಈ ಸಮಸ್ಯೆ ಉದ್ಭವಿಸುತ್ತದೆ. ಕೆಲವೊಮ್ಮೆ ಇದು ತುರಿಕೆ ಮತ್ತು ಕೆಂಪು ಬಣ್ಣವನ್ನು ಉಂಟುಮಾಡುತ್ತದೆ. ಹೀಗಾಗಿ ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ವೈದ್ಯರ ಭೇಟಿ ಮಾಡುವುದು ಸೂಕ್ತ.