Health Tips: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ..?
ಪ್ರತಿದಿನ ಬೆಳಗ್ಗೆ ಅಡುಗೆಮನೆ ಪ್ರವೇಶಿಸಿ ಒಂದು ಕಪ್ ಕಾಫಿ ತಯಾರಿಸಿ ಕುಡಿಯುವ ಅಭ್ಯಾಸವಿದ್ದರೆ ನೀವು ನಿರೀಕ್ಷಿಸುವ ಪ್ರಯೋಜನ ಪಡೆಯಲು ಸಾಧ್ಯವಾಗದಿರಬಹುದು. ಏಕೆಂದರೆ ನಿಮ್ಮ ದೇಹದಲ್ಲಿನ ಕಾರ್ಟಿಸೋಲ್ ಮಟ್ಟವು ಬೆಳಗ್ಗೆ ಅತ್ಯಧಿಕವಾಗಿರಬೇಕು. ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಕಾರ್ಟಿಸೋಲ್ ಉತ್ಪಾದನೆಗೆ ಕಾಫಿಯಲ್ಲಿರುವ ಕೆಫೀನ್ ಅಡ್ಡಿಪಡಿಸುತ್ತದೆ.
ಕಾರ್ಟಿಸೋಲ್ ಮಟ್ಟ ಹೆಚ್ಚಿರುವ ಸಮಯದಲ್ಲಿ ಕಾಫಿ ಕುಡಿಯುವುದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಅಂದರೆ ದಿನ ಮುಂದುವರೆದಂತೆ ನೀವು ಕೆಫೀನ್ ಮೇಲೆ ಹೆಚ್ಚು ಅವಲಂಬಿಸಿರುತ್ತೀರಿ. ಕಾರ್ಟಿಸೋಲ್ ಬೆಳಗ್ಗೆ 10ರ ನಡುವೆ ತಗ್ಗಿದ ವೇಳೆ ನಿಮ್ಮ ಕೆಫೀನ್ ಸೇವನೆಯಿಂದ ಹೆಚ್ಚಿನದನ್ನು ಪಡೆಯಲು ಆ ಅವಧಿಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನೀವು ಕಾಫಿ ಕುಡಿಯಬಾರದು.
ಸಲ್ಪ ಸಲ್ಪವೇ ಕಾಫಿ ಸೇವನೆ ಮಾಡುವುದು ಉತ್ತಮ. ಕೆಫೀನ್ ಕುಡಿಯುವ ಅರ್ಧ ಘಂಟೆಯಿಂದ ಒಂದು ಗಂಟೆಯೊಳಗೆ ರಕ್ತಸಂಚಾರ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಆದ್ದರಿಂದ ಪ್ರತಿ ಬಾರಿಯೂ ಸ್ವಲ್ಪವೇ ಕಾಫಿ ಕುಡಿಯುವುದನ್ನು ರೂಡಿಸಿಕೊಳ್ಳುವುದು ಉತ್ತಮ.
ಅನೇಕರು ಕೇಳಬಹುದು ರಾತ್ರಿ ವೇಳೆ ಕಾಫಿ ಕುಡಿಯುವುದು ಉತ್ತಮವೇ? ಎಂದು. ಆದರೆ ದಿನದ ಕೊನೆದ ಸಮಯದಲ್ಲಿ ಕಾಫಿಯನ್ನು ಕುಡಿಯಬೇಡಿ. ನಿಮ್ಮ ಕೊನೆಯ ಕಪ್ ನಂತರ 6 ಗಂಟೆಗಳ ಕಾಲ ನಿದ್ರೆ ಮಾಡುವ ನಿಮ್ಮ ಸಾಮರ್ಥ್ಯಕ್ಕೆ ಕೆಫೀನ್ ಅಡ್ಡಿಪಡಿಸುತ್ತದೆ. ಹೀಗಾಗಿ ಕಾಫಿ ಕುಡಿಯುವುದಕ್ಕೆ ಒಂದು ಉತ್ತಮ ಸಮಯವನ್ನು ನಿಗದಿಪಡಿಸಿ ಆ ಸಮದಲ್ಲಿ ಮಾತ್ರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ದಿನದ ಕೊನೆ ಗಂಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮ್ಮ ಸುಖಕರ ನಿದ್ರೆಗೆ ತೊಂದರೆಯುಂಟಾಗಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಿರಿ. ಕೊನೆಯದಾಗಿ ಹೇಳಬೇಕೆಂದರೆ ನೀವು ಕಾಫಿಯನ್ನು ನಿಧಾನವಾಗಿ ಕುಡಿಯಿರಿ ಮತ್ತು ನಿಮ್ಮ ಕಾಫಿಗೆ ಸಕ್ಕರೆ ಸೇರಿಸುವುದನ್ನು ಆದಷ್ಟು ತಪ್ಪಿಸುವುದು ಒಳಿತು.