Healthy Lifestyle: ಆರೋಗ್ಯಕರ ಜೀವನಶೈಲಿಗೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ

Thu, 13 Jun 2024-3:00 pm,

ಮಲಗುವ ಮೊದಲು ನೀರು ಕುಡಿಯಿರಿ. ಇದರಿಂದ ಇಡಿ ರಾತ್ರಿ ದೇಹದ ಚಯಾಪಚಯ ಕ್ರಿಯೆಗೆ ಬೇಕಾದ ನೀರು ಸಿಗುತ್ತದೆ. ಇದಲ್ಲದೆ ಹೃದಯಾಘಾತದಂತಹ ಅಪಾಯವೂ ತಪ್ಪುವ ಸಾಧ್ಯತೆಗಳಿವೆ.

ನಾರಿನಂಶ ಹೆಚ್ಚಿರುವ ಒಣದ್ರಾಕ್ಷಿ ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಅಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಗಳನ್ನು ತಹಬದಿಗೆ ತರುತ್ತದೆ.

ಬೇಸಿಗೆಯಲ್ಲಿ ಬಿಸಿಯಿಂದಾಗಿ ಪಿತ್ತವು ಅತಿಯಾಗದಂತೆ ದ್ರಾಕ್ಷಿ, ಮಾವು ಸೇವಿಸಬೇಕು. ತಂಪಾಗಿ ಗಾಳಿ ಬೀಸುವ, ನೆರಳಿರುವ, ಉದ್ಯಾನ, ನದಿ ಮುಂತಾದ ಪ್ರದೇಶಗಳ ವಿವಾಹ, ಮಾನಸಿಕ ಉಲ್ಲಾಸ, ಬದುಕಿನಲ್ಲಿ ಉತ್ಸಾಹ ತುಂಬುವ ಚಟುವಟಿಕೆಗಳು ವಸಂತದಲ್ಲಿ ಆರೋಗ್ಯವನ್ನು ಕಾಪಾಡುತ್ತವೆ. 

ಮೆಗ್ನೀಶಿಯಂ ಮತ್ತು ಸತುವಿನ ಕೊರತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಬಲ್ಲದು. ಈ ಕೊರತೆಯನ್ನು ಸುಲಭವಾಗಿ ನೀಗಿಸುವುದು ಬೀಜಗಳು. ಗೋಡಂಬಿಯಲ್ಲಿ ಅಧಿಕ ಪ್ರಮಾಣದಲ್ಲಿ ಜಿಂಕ್‌ ಅಂಶವಿದೆ. ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವಿದೆ. ಹೀಗಾಗಿ ಹಲವು ರೀತಿಯ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. 

ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link