Healthy Lifestyle: ಸಾಟಿಯೇ ಇಲ್ಲದ ಸೌಂದರ್ಯ ಹಾಗೂ ಆರೋಗ್ಯ ನಿಮ್ಮದಾಗಬೇಕೆ? ನಿತ್ಯ ಒಂದು ಗ್ಲಾಸ್ ಈ ಹಣ್ಣಿನ ಜ್ಯೂಸ್ ಸೇವಿಸಿ

Tue, 03 Aug 2021-5:38 pm,

1. ನೋನಿ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ಬ್ಲಡ್ ಶುಗರ್ ಲೆವಲ್ ನಿಯಂತ್ರಣದಲ್ಲಿರುತ್ತದೆ - 'ಮಾಲಿಕ್ಯೂಲ್ಸ್' ಹೆಸರಿನ ಜರ್ನಲ್ ವೊಂದರಲ್ಲಿ ಪ್ರಕಟಗೊಂಡ ಅಧ್ಯಯನವೊಂದರ ಪ್ರಕಾರ, ನೋನಿ ಹಣ್ಣಿನಲ್ಲಿ ಮಧುಮೇಹ ನಿರೋಧಕ ಗುಣಗಳಿವೆ. ಮಧುಮೇಹದಿಂದ ರಕ್ಷಿಸಿಕೊಳ್ಳಬೇಕು ಎಂದಾದರೆ ನಿತ್ಯ ನೋನಿ ಹಣ್ಣನ್ನು ಸೇವಿಸಿ. ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅದನ್ನು ನಿಯಂತ್ರಿಸಲು ಪರದಾಡುತ್ತಿರುವವರು ನಿತ್ಯ ಒಂದು ಗ್ಲಾಸ್ ನೋನಿ ಹಣ್ಣಿನ ಜ್ಯೂಸ್ ಕುರಿತು ಆಲೋಚಿಸಬೇಕು. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ತರಲು ಕೇವಲ ಮೂರುವಾರಗಳ ಕಾಲ ಬೇಕು. 

2. ಇದು ನಿಮ್ಮಲ್ಲಿ ಗ್ಲೋ ಹೆಚ್ಚಿಸಲು ಸಹಕಾರಿಯಾಗಿದೆ - ನೋನಿ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳಿದ್ದು ಇದು ನಿಮ್ಮ ಚರ್ಮಕ್ಕೆ ಒಂದು ಉತ್ತಮ ಔಷಧಿಯಾಗಿದೆ. ನೋನಿ ಹಣ್ಣಿನ ರಸವನ್ನು ಕುಡಿಯುವುದು ನಿಮ್ಮ ರಕ್ತವನ್ನು ನಿರ್ವಿಷಗೊಳಿಸಲು ಮಾತ್ರವಲ್ಲ, ನಿಮ್ಮ ಕರುಳಿನ ಆರೋಗ್ಯವನ್ನು ನಿಯಂತ್ರಣದಲ್ಲಿರಿಸುತ್ತದೆ. ಇದೆಲ್ಲವೂ ಉತ್ತಮ ಕೋಶ ರಚನೆ ಮತ್ತು ಶಾಶ್ವತ ಸೌಂದರ್ಯಕ್ಕೆ ಕಾರಣವಾಗುತ್ತದೆ.

3. ಇದು ಕೀಲು ನೋವು ಸಮಸ್ಯೆಯನ್ನು ನಿವಾರಿಸುತ್ತದೆ - ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ನೋವಿನ ನಿಜವಾದ ಅರ್ಥ ತಿಳಿದಿರುತ್ತದೆ. ಏಕೆಂದರೆ ದಿನನಿತ್ಯ ಅವರು ಈ ನೋವನ್ನು ಅನುಭವಿಸುತ್ತಿರುತ್ತಾರೆ. ಇದಲ್ಲದೆ, ಈ ರೋಗಕ್ಕೆ ಸಂಬಂಧಿಸಿದ ವಿಕೃತಿಗಳು ಇನ್ನಷ್ಟು ಸಮಸ್ಯಾತ್ಮಕವಾಗಿರುತ್ತವೆ. ಆದರೆ ನೀವು ನಿಮ್ಮ ದೈನಂದಿನ ಆಹಾರದಲ್ಲಿ ನೋನಿ ಹಣ್ಣಿನ ರಸವನ್ನು ಸೇರಿಸಿದರೆ, ಈ ಸಮಸ್ಯೆಯನ್ನು ನೀವು ಚೆನ್ನಾಗಿ ನಿಭಾಯಿಸಬಹುದು ಎಂದು ಜರ್ನಲ್ ಫುಡ್ಸ್ ನಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.

4. ನಿಮ್ಮ ಕೂದಲಿನ ಆರೋಗ್ಯಕ್ಕೆ ನೋನಿ ಹಣ್ಣಿನ ಜ್ಯೂಸ್ ತುಂಬಾ ಲಭಕಾರಿಯಾಗಿದೆ - ಬೆವರು ಮತ್ತು ತೇವಾಂಶ ನಿಮ್ಮ ತಲೆಯಲ್ಲಿ  ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇದು ಕೂದಲಿನ ಬೇರನ್ನು ಹಾನಿಗೊಳಿಸಬಹುದು ಇದರಿಂದಾಗಿ ನೀವು ತಲೆತುರಿಕೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಆದರೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ  ನೋನಿ ಹಣ್ಣಿನ ರಸವನ್ನು ಸೇವಿಸುವ ಮೂಲಕ ಇದನ್ನು  ನಿವಾರಿಸಬಹುದು.  

5. ಆಯಾಸ ಕಡಿಮೆಗೊಳಿಸಲು ಇದು ಹೆಸರುವಾಸಿಯಾಗಿದೆ - ಶಾರೀರದಲ್ಲಿ ಕಬ್ಬಿಣಾಂಶದ ಕೊರತೆ ಆಯಾಸಕ್ಕೆ ಕಾರಣವಾಗುತ್ತದೆ. ಇದರಿಂದ ಎನಿಮಿಯಾ ಕಾಯಿಲೆ ಕೂಡ ಬರಬಹುದು. ನೋನಿ ಹಣ್ಣು ಕಬ್ಬಿಣಾಂಶಗಳ ಆಗರವಾಗಿದೆ. ಹೀಗಾಗಿ ಇದು ಹಾಲುಣಿಸುವ ತಾಯಂದಿರರ ಹಾಗೂ ಗರ್ಭವತಿ ಮಹಿಳೆಯರ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. 

6. ದೇಹದಲ್ಲಿನ ಯುರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ - ದೇಹದಲ್ಲಿ ಅಧಿಕ ಉರಿಕ್ ಆಮ್ಲದ ಸಮಸ್ಯೆ ವೃದ್ಧರನ್ನು ಕಾಡುತ್ತದೆ. ಈ ಸಮಸ್ಯೆಯು ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಅಡ್ಡಿಪಡಿಸುವುದರ ಜೊತೆಗೆ  ತುಂಬಾ ನೋವಿನಿಂದ ಕೂಡಿರುತ್ತದೆ. ನಿಮ್ಮ ಮನೆಯಲ್ಲಿ ಈ ರೀತಿಯ ಸಮಸ್ಯೆ ಯಾರಿಗಾದರು ಇದ್ದರೆ, ಸಮಯವನ್ನು ವ್ಯರ್ಥ ಮಾಡದೆ ಅವರ ಆಹಾರದಲ್ಲಿ ಒಂದು ಲೋಟ ನೋನಿ ಜ್ಯೂಸ್ ಸೇರಿಸಿ ಮತ್ತು ಬದಲಾವಣೆಯನ್ನು ಗಮನಿಸಿ.

7. ಸಾಮಾನ್ಯವಾಗಿ ಮಾನ್ಸೂನ್ ಬಂತೆಂದರೆ, ಅದು ತನ್ನೊಂದಿಗೆ ರೋಗಗಳನ್ನು ಸಹ ಹೊತ್ತು ತರುತ್ತದೆ ಎನ್ನಲಾಗುತದೆ. ಕೆಮ್ಮು, ಶೀತ, ಮೈ-ಕೈ ನೋವು, ಜ್ವರ, ಭೇದಿ ಇತ್ಯಾದಿ. ಆದರೆ. ನೋನಿ ಹಣ್ಣನ್ನು ಸೇವಿಸುವವರಲ್ಲಿ ಇಮ್ಯೂನಿಟಿ ಹೆಚ್ಚಾಗಿರುವ ಕಾರಣ ಅವರಿಗೆ ಈ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link