ಹಾರ್ಟ್ ಅಟ್ಯಾಕ್ ತಡೆಯಬಲ್ಲ ಶಕ್ತಿಯುತ ಹಣ್ಣು.. ದಿನಕ್ಕೆ ಒಂದು ಸೇವಿಸಿದರೂ ಸಾಕು ಹೃದಯಾಘಾತದ ಅಪಾಯವಿಲ್ಲ! ಶುಗರ್, ಬಿಪಿ ಕೂಡ ಬರೋದಿಲ್ಲ!
fruits that prevent heart attacks: ಹಾರ್ಟ್ ಅಟ್ಯಾಕ್ ತಡೆಯಬಲ್ಲ ಶಕ್ತಿಯುತ ಹಣ್ಣು ಒಂದಿದೆ. ಈ ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೂ ಸಾಕು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದಾಗಿದೆ.
ಅತ್ತಿ ಹಣ್ಣಿನ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಹಣ್ಣನ್ನು ಇಂಗ್ಲಿಷ್‌ನಲ್ಲಿ ಇಂಡಿಯನ್ ಫಿಗ್ ಎಂದು ಕರೆಯಲಾಗುತ್ತದೆ. ರಸ್ತೆ ಬದಿಗಳಲ್ಲಿ ಎತ್ತರದ ಅತ್ತಿ ಮರವನ್ನು ನೋಡಬಹುದು. ಅತ್ತಿ ಹಣ್ಣು ಎಲ್ಲೆಡೆ ಸಿಗುವ ಸಾಮಾನ್ಯ ಹಣ್ಣಾಗಿದೆ.
ಅತ್ತಿ ಹಣ್ಣು ಹೃದಯದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಮಧುಮೇಹವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಹೆಚ್ಚಿನ ಜನರಿಗೆ ಅತ್ತಿ ಹಣ್ಣು ಸೇವನೆಯ ಲಾಭ ತಿಳಿದಿಲ್ಲದಿರಬಹುದು.
ಅತ್ತಿ ಮರದ ಎಲೆಗಳು, ತೊಗಟೆ ಮತ್ತು ಹಣ್ಣುಗಳನ್ನು ಔಷಧೀಯ ಸಂಪತ್ತು ಎಂದು ಪರಿಗಣಿಸಲಾಗಿದೆ.
ಅತ್ತಿ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣುಗಳು ಪೈಲ್ಸ್, ಚರ್ಮ ರೋಗ ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತವೆ.
ಅತ್ತಿ ಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಲಾಭಕರ. ಅತ್ತಿ ಮರದ ಎಲೆಗಳು ಮತ್ತು ತೊಗಟೆಯನ್ನು ಕಷಾಯವಾಗಿ ತೆಗೆದುಕೊಳ್ಳುವುದರಿಂದ ಅನೇಕ ರೀತಿಯ ಸೋಂಕುಗಳನ್ನು ತಡೆಯಬಹುದು.
ಅತ್ತಿ ಹಣ್ಣುಗಳು ಟಿಬಿಯಂತಹ ಮಾರಣಾಂತಿಕ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮರದ ತೊಗಟೆಯ ಕಷಾಯವು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
ಅತ್ತಿ ಹಣ್ಣಿನಲ್ಲಿ ವಿಟಮಿನ್ ಬಿ 2 ಅಂಶ ಸಮೃದ್ಧವಾಗಿ ಸಿಗುತ್ತದೆ. ಅತ್ತಿ ಹಣ್ಣಿನ ಸೇವನೆಯಿಂದ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ.
ಪ್ರತಿದಿನ ಒಂದಾದರೂ ಅತ್ತಿ ಹಣ್ಣು ತಿಂದರೆ ಮಧುಮೇಹದಿಂದ ರಕ್ಷಣೆ ಪಡೆಯಬಹುದು. ಹೃದಯದ ಆರೋಗ್ಯಕ್ಕೂ ಅತ್ತಿ ಹಣ್ಣು ಉಪಯುಕ್ತ. ಇದನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.