ನಿಮ್ಮ ಚರ್ಮವೇ ನೀಡುತ್ತದೆ ಹೃದಯಾಘಾತದ ಮುನ್ಸೂಚನೆ

Wed, 18 Jan 2023-2:03 pm,

ಎದೆನೋವಿನ ಹೊರತಾಗಿ, ಹೃದಯಾಘಾತದ ಮೊದಲು ಅನೇಕ ಲಕ್ಷಣಗಳು ಕಾಣಿಸುತ್ತವೆ. ಚರ್ಮವು ತೆಳುವಾಗಿ, ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರು ಬರುತ್ತದೆ. ವಾಕರಿಕೆ, ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾದ ಲಕ್ಷಣಗಳು ಕಾಣಿಸುತ್ತವೆ.   

ಪುರುಷರಿಗೆ  ಹೃದಯಾಘಾತಕ್ಕೂ ಮುನ್ನ ಎದೆ ನೋವು ಕಾಣಿಸಿಕೊಂಡರೆ, ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು  ಕಾಣಿಸಿಕೊಳ್ಳುತ್ತದೆ.   

ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ. ಮಧುಮೇಹವು ಹೃದಯಾಘಾತದ ಅತ್ಯಂತ ಸಂದಿಗ್ದ ಲಕ್ಷಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವು ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ.   

ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ  ಆಹಾರವನ್ನು ತೆಗೆದುಕೊಳ್ಳಿ. 

ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link