ಮಧುಮೇಹಿಗಳಲ್ಲಿ ಹೀಗಾಗುತ್ತಿದ್ದರೆ ಖಂಡಿತಾ ಅದು ಹಾರ್ಟ್ ಅಟ್ಯಾಕ್ ಲಕ್ಷಣಗಳು!ಮಾಮೂಲಿಯೆಂದು ನಿರ್ಲಕ್ಷಿಸುವುದೇ ಜಾಸ್ತಿ

Mon, 25 Nov 2024-12:04 pm,

ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯವು ಸಾಮಾನ್ಯ ಜನರಿಗಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣವೆಂದರೆ ಮಧುಮೇಹವು ಹೃದಯ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.   

ಮಧುಮೇಹ ರೋಗಿಗಳು ಹೃದಯಾಘಾತದ ಸಮಯದಲ್ಲಿ ತೀವ್ರವಾದ ಎದೆ ನೋವನ್ನು ಅನುಭವಿಸಬಹುದು. ಕೆಲವೊಮ್ಮೆ ನೋವಿನ ಬದಲಿಗೆ ಎದೆ ಭಾರ ಅಥವಾ ಒತ್ತಡವನ್ನು ಅನುಭವಿಸಬಹುದು. ಇದನ್ನು ಆಂಜಿನಾ ಎಂದೂ ಕರೆಯುತ್ತಾರೆ.

ಹೃದಯಾಘಾತದ ಮೊದಲು, ಮಧುಮೇಹ ರೋಗಿಗಳಿಗೆ ತುಂಬಾ ದಣಿವಾಗುವುದು ಅಥವಾ ದೌರ್ಬಲ್ಯ ಎದುರಾಗುತ್ತದೆ. ಈ ರೋಗಲಕ್ಷಣವು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.

ಮಧುಮೇಹ ರೋಗಿಗಳಲ್ಲಿ, ಉಸಿರಾಟದ ತೊಂದರೆ ಅಥವಾ ಸರಿಯಾಗಿ ಉಸಿರಾಡುವುದಕ್ಕೆ ಆಗದಿರುವ ಸಮಸ್ಯೆ ಉಂಟಾದರೆ ಅದು ಹೃದಯಾಘಾತದ ಸಂಕೇತವಾಗಿರುತ್ತದೆ. ಯಾವ ಕ್ಷಣದಲ್ಲಿಯೇ ಆಗಲಿ ಉಸಿರಾಡುವುದು ಕಷ್ಟವಾದಾಗ ಆ ಬಗ್ಗೆ ಕಾಳಜಿ ವಹಿಸಬೇಕು. 

ಹೃದಯಾಘಾತದ ಸಮಯದಲ್ಲಿ ಹಠಾತ್ ಆಗಿ ಬೆವರು ಬರುವುದು ಸಾಮಾನ್ಯ ಲಕ್ಷಣವಾಗಿದೆ. ಮಧುಮೇಹ ರೋಗಿಗಳು ಈ ರೋಗಲಕ್ಷಣವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. 

ಮಧುಮೇಹ ರೋಗಿಗಳಿಗೆ ಹೃದಯಾಘಾತದ ಸಮಯದಲ್ಲಿ ವಾಕರಿಕೆ ಅಥವಾ ವಾಂತಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಧುಮೇಹಿಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link