Heart Healthy Drinks: ನಿತ್ಯ ಈ ಪಾನೀಯಗಳ ಸೇವನೆಯಿಂದ ಹೃದಯ ಸಂಬಂಧಿತ ರೋಗಗಳಿಂದ ದೂರ ಉಳಿಯಬಹುದು
ಹೃದಯದ ಆರೋಗ್ಯ: ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯಕರ ಆಹಾರಪದ್ದತಿಯನ್ನು ರೂಢಿಸಿಕೊಳ್ಳುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನಲಾಗುತ್ತದೆ. ಪ್ರತಿನಿತ್ಯ ಕೆಲವು ಜ್ಯೂಸ್/ ಪಾನೀಯಗಳನ್ನು ಕುಡಿಯುವುದರಿಂದ ನಾವು ಹೃದಯ ಸಂಬಂಧಿತ ರೋಗಗಳಿಂದ ದೂರ ಉಳಿಯಬಹುದು. ಹೃದಯವನ್ನು ಆರೋಗ್ಯವಾಗಿರಿಸಬಹುದು ಎಂದು ಹೇಳಲಾಗುತ್ತದೆ. ಈ ಫೋಟೋ ಗ್ಯಾಲರಿಯಲ್ಲಿ ಅಂತಹ 5 ಪಾನೀಯಗಳ ಬಗ್ಗೆ ತಿಳಿಯೋಣ...
ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್ ಅನ್ನು ನಿತ್ಯ ಕುಡಿಯುವುದರಿಂದ ಇದು ನಮ್ಮನ್ನು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.
ಟೊಮ್ಯಾಟೋ ಜ್ಯೂಸ್: ಪ್ರತಿ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಟೊಮ್ಯಾಟೋವನ್ನು ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಇದು ಹೃದಯವನ್ನು ಗಟ್ಟಿಯಾಗಿರಿಸುತ್ತದೆ. ಮಾತ್ರವಲ್ಲ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಆರೆಂಜ್ ಜ್ಯೂಸ್: ಬಹಳ ಸುಲಭವಾಗಿ ತಯಾರಿಸಬಹುದಾದ ಆರೆಂಜ್ ಜ್ಯೂಸ್ ಸೇವನೆಯು ಹೃದಯವನ್ನು ಆರೋಗ್ಯವಾಗಿರಿಸಲು ತುಂಬಾ ಪ್ರಯೋಜನಕಾರಿ ಪಾನೀಯಗಳಲ್ಲಿ ಒಂದಾಗಿದೆ.
ಬೀಟ್ರೂಟ್ ಜ್ಯೂಸ್: ದೇಹದಲ್ಲಿ ರಕ್ತದ ಕೊರತೆ ಇರುವವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸೌವ ಬೀಟ್ರೂಟ್ ಜ್ಯೂಸ್ ಹೃದಯದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ರಸವಾಗಿದೆ.
ಸಿಟ್ರಸ್ ಹಣ್ಣಿನ ಜ್ಯೂಸ್: ಸಿಟ್ರಸ್ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ, ಹೃದಯ ಸಂಬಂಧಿತ ರೋಗಗಳಿಂದ ದೂರ ಉಳಿಯಲು ಸಿಟ್ರಸ್ ಹಣ್ಣಿನ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.