GSAT-11: ಈಗ ಭಾರತದ ಮೂಲ ಮೂಲೆಯಲ್ಲೂ ಸಿಗಲಿದೆ ಇಂಟರ್ನೆಟ್
ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್ ಗಯಾನಾದಲ್ಲಿರುವ ಕೋರೌನಲ್ಲಿರುವ ಏರಿಯನ್ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ಬೆಳಿಗ್ಗೆ 2.07 ನಿಮಿಷಕ್ಕೆ ಉಡಾಯಿಸಲಾಯಿತು. ಏರಿಯಾನ್‌ಸ್ಪೇಸ್‌ನ ಏರಿಯಾನ್-5 ರಾಕೆಟ್ ಭಾರತದ ಈ ಅತ್ಯಾಧುನಿಕ ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್-11 ಮತ್ತು ದಕ್ಷಿಣ ಕೊರಿಯಾದ ಜಿಯೋ- ಕಾಂಪ್‌ಸ್ಯಾಟ್-2ಎ ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗಳಿಗೆ ಸೇರಿಸಿತು.
30 ನಿಮಿಷಗಳ ಉಡಾವಣೆ ಅವಧಿಯಲ್ಲಿ ಜಿಸ್ಯಾಟ್-11 ರಾಕೆಟ್‌ನಿಂದ ಬೇರ್ಪಟ್ಟು ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ. ನಾಲ್ಕು ನಿಮಿಷಗಳ ಬಳಿಕ ಕೊರಿಯನ್ ಉಪಗ್ರಹವನ್ನು ರಾಕೆಟ್‌ನಿಂದ ಪ್ರತ್ಯೇಕಿಸಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇಸ್ರೋ ಮುಖ್ಯಸ್ಥ ಜಿಸ್ಯಾಟ್-11 ಭಾರತವು ನಿರ್ಮಿಸಿದ ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹ ಆಗಿದೆ. ಏರಿಯನ್ -5 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರ ತೂಕ 5,854 ಕೆ.ಜಿ. ಎಂದು ತಿಳಿಸಿದರು.
ಈ ಅತ್ಯಾಧುನಿಕ ಜಿಸ್ಯಾಟ್-11 ಉಪಗ್ರಹದ ಜೀವಿತಾವಧಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ದೇಶಾದ್ಯಂತ ಅತಿ ವೇಗದ ಇಂಟರ್ನೆಟ್ ಸಂಪರ್ಕದ ವಿಸ್ತರಣೆಗೆ ಇದು ನೆರವಾಗಲಿದೆ.
ಜಿಸ್ಯಾಟ್ -11 ರ ಏರಿಯನ್ -5 ರಿಂದ ಬೇರ್ಪಟ್ಟ ನಂತರ, ಹಾಸನದಲ್ಲಿರುವ ಇಸ್ರೋದ ಪ್ರಧಾನ ನಿಯಂತ್ರಣ ಕೇಂದ್ರವು ಜಿಸ್ಯಾಟ್-11ರ ನಿಯಂತ್ರಣವನ್ನು ಪಡೆದಿದ್ದು, ಮುಂದಿನ ಐದು ದಿನಗಳಲ್ಲಿ ಉಪಗ್ರಹವನ್ನು ಅಂತಿಮ ಕಕ್ಷೆಯಲ್ಲಿ ಕೂರಿಸಲಾಗುವುದು ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
ಉಪಗ್ರಹವನ್ನು ಪ್ರಸ್ತುತ ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆಯಲ್ಲಿ ಸ್ಥಾಪಿಸಲಾಗಿದೆ. ನಂತರದ ದಿನಗಳಲ್ಲಿ ಕ್ರಮೇಣ ಇದನ್ನು ಭೂಸ್ಥಾಯೀ ವರ್ಗದಲ್ಲಿ ಹಂತ ಹಂತದಲ್ಲಿ ಕಳುಹಿಸಲಾಗುತ್ತದೆ. ಭೂಸ್ಥಾಯೀ ಕಕ್ಷೆಯ ಎತ್ತರ ಭೂಮಧ್ಯದಿಂದ ಸುಮಾರು 36,000 ಕಿ.ಮೀ.
GSAT-11 ಭೂಸ್ಥಾಯೀ ಕಕ್ಷೆಯಲ್ಲಿ 74 ಡಿಗ್ರಿ ಪೂರ್ವಕ್ಕೆ ಇಡಲಾಗುವುದು ಎಂದು ಇಸ್ರೊ ಹೇಳಿದೆ. ಅದರ ನಂತರ, ಎರಡು ಸೌರ ಕಮಾನುಗಳು ಮತ್ತು ನಾಲ್ಕು ಆಂಟೆನಾ ಪ್ರತಿಫಲಕಗಳನ್ನು ಸಹ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ಉಪಗ್ರಹ ಕೆಲಸ ಪ್ರಾರಂಭಿಸುತ್ತದೆ.
ಇಸ್ರೊದ ಪ್ರಕಾರ, GSAT -11 ಭಾರತದ ಮುಖ್ಯ ಭೂಭಾಗ ಮತ್ತು ದ್ವೀಪ ಪ್ರದೇಶಗಳಲ್ಲಿ ಉನ್ನತ-ವೇಗದ ಡಾಟಾ ಸೇವೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಇಡೀ ದೇಶಕ್ಕೆ ಸಂಪರ್ಕ ಏರ್ಪಡಿಸಲು ಹಲವು ಇನ್ಫ್ರಾರೆಡ್ ಕಿರಣಗಳನ್ನು ಬಳಸುತ್ತದೆ. ಈ ಕಿರಣಗಳ ವ್ಯಾಪ್ತಿ ತೀರಾ ಕಡಿಮೆ. ಆದರೆ ಸಾಮರ್ಥ್ಯ ಅತ್ಯಧಿಕ. ಹೀಗಾಗಿ ದತ್ತಾಂಶ ರವಾನೆಗೆ ಪ್ರಚಂಡ ವೇಗವಿರುತ್ತದೆ. ಇಂತಹ 32 ಕಿರಣಗಳು ದೇಶದ 16 ಸ್ಥಳಗಳಲ್ಲಿ ಕೇಂದ್ರೀಕೃತವಾಗಿರುತ್ತವೆ.
ಈ ಉಪಗ್ರಹವು ಭಾರತದಲ್ಲಿ 16 ಜಿಬಿಪಿಎಸ್ ದತ್ತಾಂಶ ವೇಗವನ್ನು ಒದಗಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ನಾಲ್ಕು ಸಂವಹನ ಉಪಗ್ರಹಗಳ ಮೂಲಕ 100 ಜಿಬಿಪಿಎಸ್ ದತ್ತಾಂಶ ವೇಗವನ್ನು ಒದಗಿಸುವ ಗುರಿಯನ್ನು ಗುರಿಪಡಿಸಲಾಗಿದೆ ಎಂದು ಅವರು ಹೇಳಿದರು. GSAT-11 ಈ ವಿಭಾಗದಲ್ಲಿ ಮೂರನೇ ಉಪಗ್ರಹವಾಗಿದೆ.