ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ!ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಸಾಧ್ಯವೇ ಇಲ್ಲ ಎನ್ನುವ ಕೆಲಸ ಕೂಡಾ ಕೈಗೂಡುವುದು !
ಶುಕ್ರದೇವನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಸಕಲ ಸುಖಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಅವರ ಜೀವನದಲ್ಲಿ ಹಣಕಾಸಿನ ಕೊರತೆ ಎದುರಾಗುವುದಿಲ್ಲ.
ಇಂದು ಮಧ್ಯಾಹ್ನ 12:05 ಕ್ಕೆ ಶುಕ್ರ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ.
ಮಿಥುನ ರಾಶಿ : ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. ಉದ್ಯಮಿಗಳು ಶೀಘ್ರದಲ್ಲೇ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಹಣಕಾಸಿನ ತೊಂದರೆ ಕಾಡುವುದಿಲ್ಲ.
ಸಿಂಹ ರಾಶಿ :ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಹಠಾತ್ ಆರ್ಥಿಕ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮೀನ ರಾಶಿ :ನಿಮ್ಮ ಮೇಲೆ ಶುಕ್ರನ ದಯೆ ಹೆಚ್ಚಾಗಿರುತ್ತದೆ. ವ್ಯಾಪಾರಸ್ಥರ ಬಾಕಿ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಬಹುದು. ವಾಹನ ಅಥವಾ ಮನೆ ಖರೀದಿಸುವ ಕನಸು ಈ ವರ್ಷ ನನಸಾಗಬಹುದು. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.