ಇವರೇ ನನ್ನ ವಾರಸುದಾರ!2,900 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಉತ್ತರಾಧಿಕಾರಿ ಘೋಷಿಸಿದ ಸಲ್ಮಾನ್ ಖಾನ್ !

Wed, 09 Oct 2024-11:25 am,

ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಗೆ 58 ವರ್ಷ ವಯಸ್ಸು. ವಯಸ್ಸು 60 ರ ಆಸುಪಾಸಿನಲ್ಲಿದ್ದರೂ ಸಲ್ಮಾನ್ ಇಂದಿಗೂ ಕುವರ ಎನ್ನುವ ಸತ್ಯ ಜಗತ್ತಿಗೆ ಗೊತ್ತಿರುವ ಸತ್ಯ.    

ಒಂದು ಕಾಲದಲ್ಲಿ ಸಾಲು ಸಾಲು ಗರ್ಲ್ ಫ್ರೆಂಡ್ ಗಳಿದ್ದರೂ ಈಗ ಗರ್ಲ್ ಫ್ರೆಂಡ್, ಮದುವೆ ಬಗ್ಗೆ ನಟ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.ಸಂದರ್ಶನಗಳಲ್ಲಿ ಕೂಡಾ ಸಲ್ಮಾನ್ ಈ ಬಗ್ಗೆ ಮಾತನಾಡಿದ್ದಾರೆ.

ವಯಸ್ಸು 60ರ ಆಸುಪಾಸಿನಲ್ಲಿ ಇದ್ದರೂ ಸಲ್ಮಾನ್ ಇಂದಿಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರಲ್ಲಿ ಒಬ್ಬರಾಗಿದ್ದಾರೆ.2,900 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಒಡೆಯ ಬಾಲಿವುಡ್ ನ ಈ ಭಾಯಿಜಾನ್.      

ಮದುವೆ ಮಕ್ಕಳು ಇಲ್ಲದ ಮೇಲೆ  ಸಲ್ಮಾನ್ ಖಾನ್ ಇಷ್ಟೊಂದು ಪ್ರಮಾಣದ ಆಸ್ತಿ ಯಾರ ಪಾಲಾಗುತ್ತದೆ ಎನ್ನುವ ಪ್ರಶ್ನೆ ಅನೇಕ ಬಾರಿ ಎದ್ದಿದೆ.ಈ ಪ್ರಶ್ನೆಗೆ ಖುದ್ದು ಸಲ್ಮಾನ್ ಉತ್ತರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಸಲ್ಮಾನ್, ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ ಹೇಳಿದ್ದಾರೆ.ತನಗೆ  ಮದುವೆಯಾದರೂ,ಮದುವೆಯಾಗದಿದ್ದರೂ ಅರ್ಧದಷ್ಟು ಆಸ್ತಿ ಟ್ರಸ್ಟ್‌ಗೆ ಸೇರುವುದಾಗಿ ಹೇಳಿದ್ದಾರೆ. 

ಒಂದು ವೇಳೆ ತಾನು ಕೊನೆಯವರೆಗೂ ಮದುವೆಯಾಗದೇ ಉಳಿದರೆ 100% ಆಸ್ತಿಯನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ  ಘೋಷಿಸಿದ್ದಾರೆ. 

ಸಲ್ಮಾನ್ ಭಾರತದಲ್ಲಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಹೆಸರಿನ ಚಾರಿಟಿಯನ್ನು ನಡೆಸುತ್ತಿದ್ದಾರೆ. ಇದು ಹಿಂದುಳಿದವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಟ್ರಸ್ಟ್ ಆಗಿದೆ.  

ಸಲ್ಮಾನ್ ತಾನು ಸ್ಥಾಪಿಸಿದ ಟ್ರಸ್ಟ್ ಗೆ ತನ್ನ ಸಂಪೂರ್ಣ ಆಸ್ತಿಯನ್ನು ಆನುವಂಶಿಕವಾಗಿ ದಾನ ಮಾಡುತ್ತಾರೆ ಎನ್ನುವ ಸುಳಿವನ್ನು ಖುದ್ದು ನಟ ಸಲ್ಮಾನ್ ಘೋಷಿಸಿದ್ದಾರೆ.  

ನಂತರ ಸಲ್ಮಾನ್ ಖಾನ್ ತಮ್ಮ ಆಸ್ತಿಯನ್ನು ತಮ್ಮ ನಾಲ್ವರು ಸಹೋದರರಿಗೆ ಹಂಚುತ್ತಾರೆ ಎಂಬ ವರದಿಗಳೂ ಬಂದಿದ್ದವು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link