ಹೆನ್ನಾ ಪೌಡರ್ ಅಲ್ಲ, ಗೋರಂಟಿ ಎಲೆಗಳನ್ನು ಈ ರೀತಿ ಹಚ್ಚಿ ಒಂದೇ ಬಾರಿಗೆ ನೈಸರ್ಗಿಕವಾಗಿ ಕಪ್ಪಾಗುತ್ತೆ ಬಿಳಿ ಕೂದಲು
ಕೈಗಳ ಅಂದವನ್ನು ಹೆಚ್ಚಿಸುವ ಗೋರಂಟಿ ಬಿಳಿ ಕೂದಲಿಗೆ ನೈಸರ್ಗಿಕ ಕಪ್ಪನ್ನು ನೀಡುತ್ತದೆ. ಅಷ್ಟೇ ಅಲ್ಲ, ಹೆನ್ನಾ ಪೌಡರ್ ಬದಲಿಗೆ ತಾಜಾ ಗೋರಂಟಿ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ತಾಜಾ ಗೋರಂಟಿ ಎಲೆಗಳನ್ನು ಬಿಳಿ ಕೂದಲಿಗೆ ಬಳಸುವುದರಿಂದ ಕೂದಲು ಸಂಪೂರ್ಣವಾಗಿ ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ. ಜೊತೆಗೆ ಗೋರಂಟಿ ಮೃದು ಹೊಳೆಯುವ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದರೆ, ಇದನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು.
ತಾಜಾ ಗೋರಂಟಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಇದರಲ್ಲಿ ತಾಜಾ ಅಲೋವೆರಾ, ಕೆಂಪು ದಾಸವಾಳದ ಹೂ, ಎಲೆಗಳ ಜೊತೆಗೆ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ರುಬ್ಬಿಟ್ಟುಕೊಂಡ ಗೋರಂಟಿ ಎಲೆಗಳನ್ನು ಕೂದಲಿಗೆ ಹಚ್ಚಿ 3-4 ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಮರುದಿನ ಕೂದಲಿಗೆ ಎಣ್ಣೆ ಹಚ್ಚಿ ಸೌಮ್ಯವಾದ ಶಾಂಪುವಿನಿಂದ ಹೇರ್ ವಾಶ್ ಮಾಡಿದರೆ ಒಂದೇ ಬಾರಿಗೆ ಗಾಢ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.