ಗೋರಂಟಿಯಲ್ಲಿ ಈ ಒಂದು ಪದಾರ್ಥ ಬೆರೆಸಿ ಬಳಸಿದರೆ ಬಿಳಿ ಕೂದಲಿನಿಂದ ಮುಕ್ತಿ, ದಟ್ಟ ಉದ್ದವಾದ ಕಪ್ಪು ಕೂದಲೂ ನಿಮ್ಮದಾಗುತ್ತೆ...!
)
ಬಿಳಿ ಕೂದಲಿಗೆ ಗೋರಂಟಿ ಎಂದರೆ ಹೆನ್ನಾ ಸುಲಭ ಪರಿಹಾರವನ್ನು ನೀಡುತ್ತದೆ. ಆದರೆ, ಬಿಳಿ ಕೂದಲನ್ನು ಗಾಢ ಕಪ್ಪು ಬಣ್ಣಕ್ಕೆ ತಿರುಗಿಸುವುದಿಲ್ಲ.
)
ಗೋರಂಟಿಯಲ್ಲಿ ಕಾಫಿ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಇದು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
)
ಒಂದು ಕಬ್ಬಿಣದ ಪ್ಯಾನ್ ನಲ್ಲಿ ಗೋರಂಟಿಯೊಂದಿಗೆ ಕಾಫಿ ಪುಡಿ ಬೆರೆಸಿ ನಿಂಬೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿಯಿಡೀ ನೆನೆಸಿಡಿ.
ರಾತ್ರಿ ತಯಾರಿಸಿಟ್ಟ ಹೆನ್ನಾ ಮಿಕ್ಸ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ 2 ಗಂಟೆಗಳ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಈ ರೀತಿ ಗೋರಂಟಿಯೊಂದಿಗೆ ಕಾಫಿ ಪುಡಿ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ, ಹೇರ್ ಫಾಲ್ ಕಡಿಮೆಯಾಗಿ, ಒಣಗಿದ ಕೂದಲಿಗೆ ಮರುಜೀವ ಬರುತ್ತದೆ. ಗಾಢ ಕಪ್ಪಾದ ಉದ್ದ ದಟ್ಟವಾದ ಕೂದಲನ್ನು ಹೊಂದಲು ಸಹಕಾರಿ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.