ಮೆಹಂದಿಯಲ್ಲಿ ಈ ಎಲೆ ಪುಡಿ ಬೆರೆಸಿ ಬಳಸಿದರೆ ನೈಸರ್ಗಿಕವಾಗಿ ಕಡು ಕಪ್ಪಾಗುತ್ತೆ ಬಿಳಿ ಕೂದಲು!
ಬಿಳಿ ಕೂದಲಿಗೆ ಮೆಹಂದಿ ಹೇರ್ ಡೈ ಹಚ್ಚುವಾಗ ಅದರಲ್ಲಿ ವಿಶೇಷವಾದ ಒಂದು ಎಲೆಯ ಪುಡಿ ಬೆರೆಸಿ ಹಚ್ಚುವುದರಿಂದ ನಿಮ್ಮ ಕೂದಲು ನೈಸರ್ಗಿಕವಾಗಿ ಕಡು ಕಪ್ಪಾಗುತ್ತದೆ.
ಅನಾದಿ ಕಾಲದಿಂದಲೂ ಕೂದಲಿನ ಆರೈಕೆಯಲ್ಲಿ ಇಂಡಿಗೋ ಎಲೆಗಳ ಪುಡಿಯನ್ನು ಬಳಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಅಮೋನಿಯದಂತಹ ಹಾನಿಕಾರಕ ರಾಸಾಯನಿಕ ಇರುವುದಿಲ್ಲ.
ಬಿಳಿ ಕೂದಲಿಗೆ ಇಂಡಿಗೋ ಎಲೆಗಳ ಪುಡಿಯನ್ನು ಬಳಸುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮಾತ್ರವಲ್ಲ, ಇದು ನೆತ್ತಿಯ ತುರಿಕೆ, ತಲೆಹೊಟ್ಟು, ನೆತ್ತಿಯಲ್ಲಿ ಸೋಂಕಿನ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
ಮೊದಲಿಗೆ ಮೆಹಂದಿ ಮತ್ತು ಇಂಡಿಗೋ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಸ್ವಲ್ಪ ಬೆಚ್ಚಗಿರುವ ನೀರಿನ ಸಹಾಯದಿಂದ ಇವೆರಡನ್ನೂ ಬೇರೇಸ್ ಪೇಸ್ಟ್ ತಯಾರಿಸಿ.
ತಯಾರಿಸಿಟ್ಟ ಮೆಹಂದಿ, ಇಂಡಿಗೋ ಮಿಶ್ರಿತ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ಚೆನ್ನಾಗಿ ಅನ್ವಯಿಸಿ. ಮೂರ್ನಾಲ್ಕು ಗಂಟೆಗಳ ಕಾಲ ಇದನ್ನು ಚೆನ್ನಾಗಿ ಒಣಗಳು ಬಿಡಿ.
ಮೆಹಂದಿ, ಇಂಡಿಗೋ ಮಿಶ್ರಿತ ಹೇರ್ ಡೈ ಅನ್ವಯಿಸಿ ಮೂರ್ನಾಲ್ಕು ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂ ಸಹಾಯದಿಂದ ಹೇರ್ ವಾಚ್ ಮಾಡಿ. ಇದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.