ಆಹಾರದ ರುಚಿ ಹೆಚ್ಚಿಸಬಲ್ಲ ಈ ಸೊಪ್ಪಿನಿಂದ ಬಿಳಿ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತೆ!
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಡೈ ಬೇಡವೇ, ಬೇಡ! ಬದಲಿಗೆ ನಿಮ್ಮ ಅಡುಗೆಯ ರುಚಿಯನ್ನು ಹೆಚ್ಚಿಸುವ ಒಂದು ಸೊಪ್ಪನ್ನು ಬಳಸಿ ನೋಡಿ.
ಕೂದಲು ಬೆಳ್ಳಗಾಗಲು ಮೆಲನಿನ್ ಕೊರತೆ ಬಹಳ ಮುಖ್ಯ ಕಾರಣ. ಕರಿಬೇವಿನ ಸೊಪ್ಪಿನಲ್ಲಿ ಮೆಲನಿನ್ ಹೇರಳವಾಗಿರುವುದರಿಂದ ಇದು ಕೂದಲನ್ನು ಸುಲಭವಾಗಿ ಕಪ್ಪಾಗಿಸುತ್ತದೆ.
ಅಡುಗೆ ಮನೆಯಲ್ಲಿ ಒಗ್ಗರಣೆಗೆ ಅತ್ಯಗತ್ಯವಾದ ಕರಿಬೇವಿನ ಸೊಪ್ಪನ್ನು ಬಳಸುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಬಹುದು. ಆದರೆ, ಸರಿಯಾದ ರೀತಿಯಲ್ಲಿ ಈ ಸೊಪ್ಪಿನ ಬಳಕೆಯಿಂದ ಮಾತ್ರ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಒಂದು ಹಿಡಿ ಕರಿಬೇವಿನ ಸೊಪ್ಪನ್ನು ನುಣ್ಣಗೆ ರುಬ್ಬಿ, ಇದರಲ್ಲಿ ಒಂದೆರಡು ಸ್ಪೂನ್ ಮೊಸರು, ಅರ್ಧ ಸ್ಪೂನ್ ಕೊಬ್ಬರಿ ಎಣ್ಣೆ, ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಬೆರೆಸಿ. ನಂತರ ಡಬಲ್ ಬಾಯ್ಲಿಂಗ್ ಸಹಾಯದಿಂದ ಸ್ವಲ್ಪ ಬಿಸಿ ಮಾಡಿ.
ಈ ರೀತಿಯಾಗಿ ತಯಾರಿಸಿಟ್ಟ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಅನ್ವಯಿಸುವುದರಿಂದ ಯಾವುದೇ ಹೇರ್ ಡೈ ಇಲ್ಲದೆ ನೈಸರ್ಗಿಕವಾಗಿ ಕೂದಲು ಕಡು ಕಪ್ಪಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.