ಸ್ಟ್ರಾಂಗ್, ಉದ್ದ ಕೂದಲಿಗಾಗಿ ಇಲ್ಲಿದೆ ಐದು ಮ್ಯಾಜಿಕಲ್ ಜ್ಯೂಸ್
ಬದಲಾದ ಜೀವನ ಶೈಲಿಯಲ್ಲಿ ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ, ಕೂದಲಿನ ಶುಷ್ಕತೆಯಂತಹ ಸಮಸ್ಯೆಗಳು ಸರ್ವೇ ಸಾಮಾನ್ಯ. ಆದರೆ, ಕಬ್ಬಿಣ, ಪ್ರೋಟೀನ್, ಆಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳ ಗಣಿಯಾಗಿರುವ ಕೆಲವು ಸ್ಪೆಷಲ್ ಜ್ಯೂಸ್ ಗಳ ಸಹಾಯದಿಂದ ನೀವು ಈ ಎಲ್ಲಾ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು. ಆ ಜ್ಯೂಸ್ ಗಳು ಯಾವುವು ಎಂದು ತಿಳಿಯೋಣ...
ಅನಾದಿ ಕಾಲದಿಂದಲೂ ಕೂದಲಿನ ಉತ್ತಮ ಬೆಳವಣಿಗೆಗೆ ನೆಲ್ಲಿಕಾಯಿ ಜ್ಯೂಸ್ ಅತ್ಯುತ್ತಮ ಎಂದು ನಿಮಗೆ ತಿಳಿದೇ ಇದೆ. ಆಗಾಗ್ಗೆ, ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂದಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ತಿನ್ನಲು ಬಲು ರುಚಿಕರವಾದ ಪ್ಲಮ್ ಹನ್ನನು ಪೋಷಕಾಂಶಗಳ ಗಣಿ ಎಂದು ಪರಿಗಣಿಸಲಾಗಿದೆ. ವಾರದಲ್ಲಿ ಒಂದೆರಡು ಬಾರಿ ಈ ಹಣ್ಣಿನ ರಸ ಕುಡಿಯುವುದರಿಂದ ಆರೋಗ್ಯಕರ ಕೇಶ ರಾಶಿಯನ್ನು ಪಡೆಯಬಹುದು.
ಪಾಲಕ್ ಸೊಪ್ಪಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ, ಕ್ಯಾರೊಟಿನಾಯ್ಡ್ಗಳು ಮತ್ತು ತಾಮ್ರದಂತಹ ಹಲವು ಪೋಷಕಾಂಶಗಳು ಕಂಡು ಬರುತ್ತವೆ. ಇದು ಕೂದಲನ್ನು ಬೇರುಗಳಿಂದ ಬಳಪಡಿಸಲು ತುಂಬಾ ಪ್ರಯೋಜನಕಾರಿ ಹಾಗಿದೆ. ವಾರದಲ್ಲಿ ಒಂದು ಬಾರಿ ಆದರೂ ಪಾಲಕ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರ ಬಲವಾದ ಕೂದಲು ನಿಮ್ಮದಾಗುತ್ತದೆ.
ಸೌತೆಕಾಯಿ ಜ್ಯೂಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿದ್ದು ಇದರ ಸೇವನೆಯಿಂದ ಕೂದಲನ್ನು ಬೇರುಗಳಿಂದ ಬಲವಾಗಿಸಬಹುದು.
ನಿಮಗೆ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ ಇದ್ದರೆ ಬೀಟ್ರೂಟ್ ಜ್ಯೂಸ್ ಕುಡಿಯುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.