ಉತ್ತಮ ರಿಟರ್ನ್ಸ್ ಪಡೆಯಲು ಇಲ್ಲಿವೆ ಬೆಸ್ಟ್ ಸೇವಿಂಗ್ ಸ್ಕೀಮ್ಸ್
ನೀವು ಉತ್ತಮ ರಿಟರ್ನ್ಸ್ ಗಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ ಆಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟ ಯಾವುದೇ ನಾಗರಿಕರು ಪ್ರಯೋಜನ ಪಡೆಯಬಹುದು. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವಾರ್ಷಿಕ 8% ವರೆಗೆ ಬಡ್ಡಿಯನ್ನು ಪಡೆಯಬಹುದು.
ಸರ್ಕಾರ ನಡೆಸುತ್ತಿರುವ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್). ಈ ಯೋಜನೆಯ ವೈಶಿಷ್ಟ್ಯವೆಂದರೆ ಕಾಂಪೌಂಡ್ ಬಡ್ಡಿ ಸೌಲಭ್ಯ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ರಿಟರ್ನ್ಸ್ ಪಡೆಯಲು ಸಾಧ್ಯವಾಗುತ್ತದೆ. ಸದ್ಯ ಈ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿ ದೊರೆಯುತ್ತಿದೆ. ಪಿಪಿಎಫ್ ಯೋಜನೆಯಲ್ಲಿ ನೀವು ಪ್ರತಿವರ್ಷ ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂ. ವರೆಗಿನ ಹೂಡಿಕೆ ಮೇಲೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ.
ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಜೀವನವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ 7.6 ಪ್ರತಿಶತ ಆದಾಯ ಲಭ್ಯವಿದೆ, ಮಾತ್ರವಲ್ಲ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ವಿನಾಯಿತಿ ಕೂಡ ಲಭ್ಯವಾಗಲಿದೆ.
ಪ್ರಸ್ತುತ ಕಿಸಾನ್ ವಿಕಾಸ್ ಪತ್ರ(ಕೆವಿಪಿ)ದ ಹೂಡಿಕೆಯ ಮೇಲೆ ಶೇಕಡಾ 7.2 ರಷ್ಟು ಬಡ್ಡಿ ಪಾವತಿಸಲಾಗುತ್ತಿದೆ. ಈ ಯೋಜನೆಯಲ್ಲಿ ಠೇವಣಿ ಇಡುವುದರಿಂದ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.
ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ (ಎನ್‌ಎಸ್‌ಎಸ್) 5 ವರ್ಷಗಳವರೆಗೆ ಹಣವನ್ನು ಠೇವಣಿ ಇಡಲಾಗುತ್ತದೆ. ಇದರಲ್ಲಿ ವಾರ್ಷಿಕ 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಯೋಜನೆಯ ಹೂಡಿಕೆಯಲ್ಲಿ ಪ್ರಸ್ತುತ ಶೇಕಡಾ 7 ರಷ್ಟು ಬಡ್ಡಿ ನೀಡಲಾಗುತ್ತಿದೆ.