ಇಂಟರ್‌ವ್ಯೂ ಮಾಡಲು ಬಂದ ನಿರೂಪಕಿಯರನ್ನೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗರು ಇವರೇ ನೋಡಿ...
ಟಿ20 ವಿಶ್ವಕಪ್ 2024ರ ಚಾಂಪಿಯನ್ ಪಟ್ಟವನ್ನು ಟೀಂ ಇಂಡಿಯಾ ಅಲಂಕರಿಸಿರುವುದು ಗೊತೇ ಇದೆ. ಬರ್ಬಾಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳ ಅಂತರದಿಂದ ಮಣಿಸಿ ಗೆಲುವು ಮುಡಿಗೇರಿಸಿಕೊಂಡಿದೆ. ಈ ವಿಶ್ವಕಪ್ ಗೆಲ್ಲಲು ಭಾರತೀಯ ಆಟಗಾರರ ಶ್ರಮ ಪಟ್ಟಿದ್ದಾರೆ. ಒಬ್ಬಬ್ಬರೂ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಆದರೆ ಎಲ್ಲಾ ಆಟಗಾರರಿಗಿಂತಲೂ ಒಂದು ಪಟ್ಟು ಹೆಚ್ಚು ಗಮನ ಸೆಳೆದ್ದದ್ದು ಜಸ್ಪ್ರಿತ್ ಬೂಮ್ರಾ.
2019 ರಲ್ಲಿ ವಿಶ್ವಕಪ್‌ನ ನಂತರ ಬೂಮ್ರಾ ಅವರನ್ನು ಸಂಜನಾ ಸಂದರ್ಶನ ಮಾಡಲು ಹೊಗುತ್ತಾರೆ. ಮೊದಲ ಬಾರಿ ಒಬ್ಬರನ್ನೊಬ್ಬರು ಬೇಟಿಯಾಗಿ ಪರಸ್ಪರ ತಪ್ಪು ಕಲ್ಪನೆಗಳನ್ನು ಒಬ್ಬರ ಮೇಲೆ ಒಬ್ಬರು ಹೊಂದಿರುತ್ತಾರೆ. ನಂತರ ಮಾತನಾಡುತ್ತಾ ಒಬ್ಬರ ಬಗ್ಗೆ ಒಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಇಬ್ಬರು ಒಳ್ಳೆಯ ಸ್ನೇಹಿತರಾಗುತ್ತಾರೆ, ಸ್ನೇಹ ಪ್ರೀತಿಗೆ ತಿರುಗುತ್ತೆ ಒಂದು ವರ್ಷಗಳ ಕಾಲ ಇಬ್ಬರು ಡೇಟ್ ಮಾಡುತ್ತಾರೆ. ನಂತರ 2021ರಲ್ಲಿ ಈ ಜೋಡಿ ಸಿಕ್ ಸಂಪ್ರದಾಯದಂತೆ ಮದುವೆಯಾಗುತ್ತಾರೆ, ಸಂಜನಾ ದಕ್ಷಿಣ ಭಾರತವರಾಗಿದ್ದು, ಅವರ ಸಂಪ್ರದಾಯದಂತೆ ಹಳದಿ ಕಾರ್ಯಕ್ರಮ ಕೂಡ ನೆರವೇರುತ್ತೆ, ಈ ಜೋಡಿಗೆ ಇದೀಗ ಪುಟ್ಟ ಮಗ ಇದ್ದಾನೆ. ಹಾಗೆ ಸಂದರ್ಶನದಲ್ಲಿ ಆದ ಬೇಟಿ ಮದುವೆಗೆ ತಿರುಗುತ್ತೆ.
ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಅವರು ಆಸ್ಟ್ರೇಲಿಯಾದ ಪ್ರಸಿದ್ಧ ಕ್ರೀಡಾ ನಿರೂಪಕಿ ರೋಸ್ ಕೆಲ್ಲಿ ಅವರನ್ನು ವಿವಾಹವಾಗಿದ್ದಾರೆ. 2012 ರಲ್ಲಿ ದಕ್ಷಿಣ ಆಫ್ರಿಕಾದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಮೊರ್ನಿಯೊ ಮತ್ತು ರೋಸ್ ಮೊದಲ ಬಾರಿಗೆ ಭೇಟಿಯಾದರು. 2014 ರ ಐಪಿಎಲ್ ಪಂದ್ಯಾವಳಿಯಲ್ಲಿ ಮೋರ್ನೆ ರೋಸ್ ಅವರನ್ನು ಪ್ರಪೋಸ್ ಮಾಡಿದ್ದರು. 2014 ರ ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆಯಾದರು.
ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಅವರು ಆಸ್ಟ್ರೇಲಿಯಾದ ಪ್ರಸಿದ್ಧ ಕ್ರೀಡಾ ನಿರೂಪಕಿ ರೋಸ್ ಕೆಲ್ಲಿ ಅವರನ್ನು ವಿವಾಹವಾಗಿದ್ದಾರೆ. 2012 ರಲ್ಲಿ ದಕ್ಷಿಣ ಆಫ್ರಿಕಾದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಮೊರ್ನಿಯೊ ಮತ್ತು ರೋಸ್ ಮೊದಲ ಬಾರಿಗೆ ಭೇಟಿಯಾದರು. 2014 ರ ಐಪಿಎಲ್ ಪಂದ್ಯಾವಳಿಯಲ್ಲಿ ಮೋರ್ನೆ ರೋಸ್ ಅವರನ್ನು ಪ್ರಪೋಸ್ ಮಾಡಿದ್ದರು. 2014 ರ ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆಯಾದರು.
ಮಯಂತಿ ಲ್ಯಾಂಗರ್ ಅವರು ಟಿವಿಯಲ್ಲಿ ಕ್ರೀಡಾ ನಿರೂಪಕಿ, ಅವರು ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರನ್ನು ವಿವಾಹವಾಗಿದ್ದಾರೆ. ಐಪಿಎಲ್‌ಗೂ ಮುನ್ನ ಆರಂಭವಾದ 'ರೆಬೆಲ್ ಲೀಗ್' ಇಂಡಿಯನ್ ಕ್ರಿಕೆಟ್ ಲೀಗ್ ಸಂದರ್ಭದಲ್ಲಿ ಸ್ಟುವರ್ಟ್ ಮೊದಲ ಬಾರಿಗೆ ಮಾಯಾಂತಿ ಅವರನ್ನು ಭೇಟಿಯಾದರು. ಈ ಲೀಗ್‌ನಲ್ಲಿ ಮಾಯಾಂತಿ ಅವರು ಸ್ಟುವರ್ಟ್ ಅವರನ್ನು ಸಂದರ್ಶನ ಮಾಡಿದ್ದರು. ಶೀಘ್ರದಲ್ಲೇ ಅವರ ಪ್ರೀತಿಯ ಕಥೆ ಪ್ರಾರಂಭವಾಯಿತು, 5 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇಬ್ಬರು 2012 ರಲ್ಲಿ ಮದುವೆಯಾದರು.
ಆಸ್ಟ್ರೇಲಿಯಾ ಆಲ್ ರೌಂಡರ್ ಬೆನ್ ಕಟಿಂಗ್, ಟಿವಿ ನಿರೂಪಕಿ ಎರಿನ್ ಹಾಲೆಂಡ್ ಅವರನ್ನು ವಿವಾಹವಾಗಿದ್ದಾರೆ. 2013 ರಲ್ಲಿ ವಿಶ್ವ ಸುಂದರಿ ಆಗಿದ್ದ ಎರಿನ್, ತನ್ನ ಸೌಂದರ್ಯದಿಂದಾಗಿ ಬಹಳ ಜನಪ್ರಿಯಳಾಗಿದ್ದಾಳೆ. ಎರಿನ್ ಮತ್ತು ಬೆನ್ ಇನ್ಸ್ಟಾಗ್ರಾಂ ಮೂಲಕ ಭೇಟಿಯಾದರು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. 2019ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ನಂತರ 2021 ರಲ್ಲಿ ವಿವಾಹವಾದರು.