Top 5 Cheapest 5G Phones: ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ 5ಜಿ ಫೋನ್‌ಗಳಿವು
ನೀವೂ ಕೂಡ ಹೊಸ 5ಜಿ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ... ಉತ್ತಮ ವೈಶಿಷ್ಟ್ಯಗಳೊಂದಿಗೆ ಕಡಿಮೆ ಬಜೆಟ್ ನಲ್ಲಿ ಲಭ್ಯವಿರುವ ಟಾಪ್ 5 5ಜಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ...
ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಳೆಯಲ್ಲಿ ಲಭ್ಯವಿರುವ 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ Samsung Galaxy M13 ಕೂಡ ಒಂದು. ಫೋನ್ 6.6-ಇಂಚಿನ FHD + ಡಿಸ್ಪ್ಲೇ, 6000mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟಪ್ (50MP + 5MP + 2MP, 8MP ಫ್ರಂಟ್ ಕ್ಯಾಮೆರಾ) ಸೇರಿದಂತೆ ಹಲವು ವೈಶಿಶ್ತ್ಯಾಗಳನ್ನು ಹೊಂದಿದ್ದು, ಇದರ ಬೆಲೆ 11,999ರೂ.ಗಳಿಂದ ಆರಂಭವಾಗುತ್ತದೆ.
12,000ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮತ್ತೊಂದು 5ಜಿ ಸ್ಮಾರ್ಟ್‌ಫೋನ್ ಎಂದರೆ Redmi 12 5G. ಇದರ ಬೆಲೆ 11,999 ರೂ.ಗಳಿಂದ ಆರ್ಮ್ಭವಾಗುತ್ತದೆ. Snapdragon 4 Gen 2 ನಿಂದ ಚಾಲಿತವಾಗುವ ಈ ಫೋನ್ 6.79 ಇಂಚಿನ FHD + 90Hz ಡಿಸ್ಪ್ಲೇ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ 50MP ಡ್ಯುಯಲ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಸೆನ್ಸಾರ್ ಕೂಡ ಲಭ್ಯವಿದೆ.
POCO M6 Pro 5G 12 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5ಜಿ ಸ್ಮಾರ್ಟ್‌ಫೋನ್ ಆಗಿದೆ. ಇದರ ಬೆಲೆ 10,999 ರೂ.ಗಳಿಂದ ಆರಂಭವಾಗುತ್ತದೆ. ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ 6.7 ಇಂಚಿನ Full HD+ ಡಿಸ್ಪ್ಲೇ, 5000mAh ಬ್ಯಾಟರಿ, 50MP + 2MP, 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಲಾವಾ ಬ್ಲೇಜ್ 5G ಬೆಲೆ 10,999 ರೂ.ಗಳಿಂದ ಆರಂಭವಾಗುತ್ತದೆ. 6.5 ಇಂಚಿನ HD+ 90Hz IPS ಡಿಸ್ಪ್ಲೇ, 5000mAh ಬ್ಯಾಟರಿ, 50MP ಕ್ಯಾಮೆರಾ ಜೊತೆಗೆ ಲಭ್ಯವಿರುವ ಈ ಸ್ಮಾರ್ಟ್‌ಫೋನ್ MediaTek ಡೈಮೆನ್ಸಿಟಿ 700 ಪ್ರೊಸೆಸರ್‌ನಿಂದ ಚಾಲಿತ ಫೋನ್ ಆಗಿದೆ.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಮತ್ತೊಂದು 5ಜಿ ಸ್ಮಾರ್ಟ್‌ಫೋನ್ ಎಂದರೆ Infinix HOT 20 5G. ಇದರ ಬೆಲೆ 11,499 ರೂ.ಗಳಿಂದ ಆರಂಭವಾಗುತ್ತದೆ. 6.6 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಫೋನ್‌ನಲ್ಲಿ ಲಭ್ಯವಿದ್ದು , ಡೈಮೆನ್ಸಿಟಿ 810 ಪ್ರೊಸೆಸರ್‌ನಿಂದ ಚಾಲಿತವಾಗುವ ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ, 50MP + AI ಲೆನ್ಸ್ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.