IPL 2021 : ಈ ಆಟಗಾರರು ಮತ್ತು ಸಿಬ್ಬಂದಿಗೆ ತಗುಲಿದೆ ಕರೋನಾ ಸೋಂಕು ; ಇಲ್ಲಿದೆ ಕಂಪ್ಲೀಟ್ ಲಿಸ್ಟ್

Wed, 05 May 2021-11:37 am,

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಅವರಿಗೆ ಮಂಗಳವಾರ ಕರೋನಾ ಸೋಂಕು ಕಾಣಿಸಿಕೊಂಡಿದೆ. ಐಪಿಎಲ್‌ನಲ್ಲಿ ಕರೋನಾ ವೈರಸ್‌ ಸೋಂಕಿಗೆ ಗುರಿಯಾದ ಇತ್ತೀಚಿನ ಪ್ರಕರಣ ಇದಾಗಿದೆ. ಈ ವರದಿ ಹೊರ ಬರುತ್ತಿದ್ದಂತೆ, ಬಿಸಿಸಿಐ ಐಪಿಎಲ್ 2021 ಅನ್ನು ರದ್ದು ಮಾಡಿದೆ.   

ದೆಹಲಿ ಕ್ಯಾಪಿಟಲ್ಸ್ ಆಟಗಾರ ಅಮಿತ್ ಮಿಶ್ರಾ ಅವರಲ್ಲೂ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದಾದ ನಂತರ ಅವರನ್ನು  ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಚಾರವನ್ನು ದೆಹಲಿ ಕ್ಯಾಪಿಟಲ್ಸ್  ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.   

ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸಿ ಕೂಡ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ವರದಿಯ ಪ್ರಕಾರ, ತಂಡದ ಮೂವರು ಸದಸ್ಯರಲ್ಲಿ ಮೊದಲೇ ಈ ವೈರಸ್‌ ಕಾಣಿಸಿಕೊಂಡಿತ್ತು. ಇದಾದ ನಂತರ,  ಹಸ್ಸಿಯ ಪರೀಕ್ಷೆ ವರದಿ ಕೂಡಾ ಪಾಸಿಟಿವ್ ಬಂದಿದೆ. 

ಇಬ್ಬರು ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರು ಕೂಡಾ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕರೋನಾ  ನಂತರ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವನ್ನು ಮುಂದೂಡಲಾಯಿತು.

ಚೆನ್ನೈ ಸೂಪರ್ ಕಿಂಗ್ಸ್ ನ  ಸಿಇಒ ಕಾಶಿ ವಿಶ್ವನಾಥ್, ಬಾಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ನಲ್ಲೂ ಕರೋನಾ ವೈರಸ್ ಕಾಣಿಸಿಕೊಂಡಿದೆ.   

ಆರ್ ಸಿಬಿ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಸಾಂಕ್ರಮಣಕ್ಕೊಳಗಾದ ಎರಡನೇ ಆಟಗಾರ. ಸ್ಯಾಮ್ಸ್ ನ ಮೊದಲ ವರದಿ ನೆಗೆಟಿವ್ ಬಂದಿತ್ತಾದರೂ ಎರಡನೇ ವರದಿಯಲ್ಲಿ ಪಾಸಿಟಿವ್ ಬಂದಿತ್ತು

ಮುಂಬಯಿ ಇಂಡಿಯನ್ಸ್  ವಿಕೆಟ್ ಕೀಪಿಂಗ್ ಕೋಚ್ ಕಿರಣ್ ಮೋರೆ ಅವರ ಕರೋನಾ ವರದಿ ಕೂಡಾ ಏಪ್ರಿಲ್ 6ರಂದು ಪಾಸಿಟಿವ್ ಬಂದಿತ್ತು. ಇದಾದ ನಂತರ ಕ್ವಾರಂಟೈನ್ ನಲ್ಲಿದ್ದರು. ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದರು.

ದೆಹಲಿ ಕ್ಯಾಪಿಟಲ್ಸ್ ನ ಫಾಸ್ಟ್ ಬೌಲರ್ Enrich Nortz ಏಪ್ರಿಲ್ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಬಂದಿದ್ದರು. ಇದಾದ ನಂತರ ಟೆಸ್ಟ್ ವೇಳೆ ಕರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು.  

ಅಕ್ಷರ್ ಪಟೇಲ್ ಕರೋನಾ ಸೋಂಕಿಗೆ ಒಳಗಾದ ದೆಹಲಿ ಕ್ಯಾಪಿಟಲ್ಸ್ ತಂಡದ ಎರಡನೇ ಆಟಗಾರ. ಮಾರ್ಚ್ 28ಕ್ಕೇ ಇವರ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಇದಾಧ ನಂತರ ಸಂಪೂರ್ಣ ಗುಣಮುಖರಾದ ಅವರು ಮತ್ತೆ ಆಟ ಮುಂದುವರೆಸಿದ್ದರು.  

ಆರ್ ಸಿಬಿ ತಂಡದ  ಓಪನರ್ ದೇವದತ್ತ ಪಡಿಕ್ಕಲ್ ಐಪಿಎಲ್ ಆರಂಭಕ್ಕೂ ಮೊದಲೇ ಕರೋನಾ ವೈರಸ್ ಗೆ ತುತ್ತಾಗಿದ್ದರು. ಇದಾದ ನಂತರ ಅವರು ತಮ್ಮ ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದರು. 

 ಕೆಕೆಆರ್ ಓಪನಿಂಗ್ ಬ್ಯಾಟ್ಸ್ ಮ್ಯಾಣ್ ನಿತೀಶ್  ರಾಣಾ ಕೂಡಾ ಐಪಿಎಲ್ ಆರಂಭಕ್ಕೂ ಮುನ್ನವೇ ಕರೋನಾ ಸೋಂಕಿಗೆ ತುತ್ತಾಗಿದ್ದರು. ಇದಾದ ನಂತರ ಅವರು ಗುಣಮುಖರಾಗಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link