Rahu Ketu Upay: ರಾಹು-ಕೇತು ದೋಷದಿಂದ ಮುಕ್ತಿಗಾಗಿ ಈ ಕೆಲಸ ಮಾಡಿ

Wed, 25 Oct 2023-6:47 am,

ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ, ಅವರ ಸ್ವರ್ಗದಂತಹ ಜೀವನವೂ ನರಕವಾಗುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು-ಕೇತು ಮಹಾದಶ ನಡೆಯುತ್ತಿದ್ದಾರೆ ಅವರ ಜೀವನದಲ್ಲಿ ಒಂದಾದ ಮೇಲೊಂದರಂತೆ ಸಮಸ್ಯೆಗಳು ಬೆಂಬಿಡದೆ ಕಾಡುತ್ತವೆ ಎಂದು ಹೇಳಲಾಗುತ್ತದೆ. 

ರಾಹುವು ದುರ್ಬಲ ಸ್ಥಾನದಲ್ಲಿದ್ದಾಗ, ಜೀವನದಲ್ಲಿ ಅಶುಭ ಘಟನೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ವ್ಯಕ್ತಿಯು ಒತ್ತಡಕ್ಕೆ ಒಳಗಾಗುತ್ತಾನೆ.

ಯಾವುದೇ ವ್ಯಕ್ತಿಯ ಜಾತಕದಲ್ಲಿ ಕೇತು ಅಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ನಿದ್ರಾಹೀನತೆ, ಆರ್ಥಿಕ ಬಿಕ್ಕಟ್ಟು ಮತ್ತು ವಿವಾದಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು, ಕೀಲು ನೋವು, ಚರ್ಮ ರೋಗಗಳು, ಮೊಣಕಾಲು ನೋವು, ಬೆನ್ನು ನೋವು ಮತ್ತು ಸಂಬಂಧಗಳಲ್ಲಿನ ಒತ್ತಡವನ್ನು ಸಹ ಅನುಭವಿಸಬೇಕಾಗುತ್ತದೆ. 

ರಾಹು-ಕೇತು ದೋಷದಿಂದ ಪರಿಹಾರಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಈ ಪರಿಹಾರಗಳನ್ನು ಕೈಗೊಳ್ಳುವುದರಿಂದ ರಾಹು-ಕೇತು ಮಹಾದಶ ಪ್ರಭಾವವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆ ಪರಿಹಾರಗಳೆಂದರೆ....   

ಜಾತಕದಲ್ಲಿ ರಾಹು-ಕೇತು ದೋಷ ಹೊಂದಿರುವವರು ಭಾನುವಾರದ ದಿನ ಮದುವೆಯಾಗದ ಹೆಣ್ಣು ಮಕ್ಕಳಿಗೆ ಪಾದ ಪೂಜೆ ಮಾಡಿ, ಸಿಹಿ ತಿನಿಸು ನೀಡಿ ಅವರ ಆಶೀರ್ವಾದ ಪಡೆಯಿರಿ. 

ನಿಯಮಿತವಾಗಿ ನಾಯಿಗೆ ಆಹಾರ ನೀಡುತ್ತಾ ಬಂದರೆ ಜಾತಕದಲ್ಲಿ ರಾಹು-ಕೇತು ದೋಷದಿಂದ ಪರಿಹಾರ ದೊರೆಯಲಿದೆ ಎಂಬ ನಂಬಿಕೆಯಿದೆ. 

ಶಿವನ ಆರಾಧನೆಯಿಂದಲೂ ರಾಹು-ಕೇತು ದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದಕ್ಕಾಗಿ, ಸೋಮವಾರದ ದಿನ ಶಿವಾನಿಗೆ ಕಪ್ಪು ಎಳ್ಳು, ಬೇಲ್ಪತ್ರೆ ಮತ್ತು ಗಂಗಾಜಲವನ್ನು ಅರ್ಪಿಸಿ. ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿ. 

ರಾಹು-ಕೇತು ಗ್ರಹಗಳ ದೋಷದಿಂದ ಮುಕ್ತಿ ಪಡೆಯಲು ನಾಗಶೇಷನ ಮೇಲೆ ನರ್ತಿಸುವ ಶ್ರೀಕೃಷ್ಣನ ಫೋಟೋವನ್ನು ಪೂಜಿಸಿ, ಈ ಸಮಯದಲ್ಲಿ 'ಓಂ ನಮೋ ಭಗವತೇ ವಾಸುದೇವಾಯ ನಮಃ' ಎಂಬ  ಮಂತ್ರವನ್ನು 108 ಬಾರಿ ಜಪಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link